

ಹೊಸಕೋಟೆ: ಶಾಲೆ ತೆರೆಯಲು ಸರ್ಕಾರ ಅಭಿಪ್ರಾಯ ಕೇಳಿರುವ ಹಿನ್ನೆಲೆಯಲ್ಲಿ ಪಾಲಕರ ಸಭೆ ಕರೆಯಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಲಲಿತಮ್ಮ ತಿಳಿಸಿದರು.
ನಗರದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ಬುಧವಾರ ಕರೆದಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದರು.
ಒಂದೆರಡು ತಿಂಗಳ ನಂತರ ಶಾಲೆ ಶುರು ಮಾಡಬೇಕು. ಪ್ರತಿ ಒಂದು ಪಾಳಿಯಲ್ಲಿ ಪಠ್ಯ ಬೋಧನೆ ಮಾಡಬೇಕು, ದಿನ ಬಿಟ್ಟು ದಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಕ್ರಮ ಕೈಗೊಳ್ಳಬೇಕು, ಆನ್‌ಲೈನ್ ಶಿಕ್ಷಣ ಬೇಡ ಎಂಬಿತ್ಯಾದಿ ಅಭಿಪ್ರಾಯ ಕೇಳಿ ಬಂದವು. ಮಧ್ಯಾಹ್ನ ಶಾಲೆಯಲ್ಲೇ ಊಟ ನೀಡಬೇಕು ಎಂದು ಕೆಲ ಪಾಲಕರು ಹೇಳಿದರೆ, ಇನ್ನೂ ಕೆಲವರು ಮನೆಯಿಂದಲೇ ಊಟ ನೀಡುವುದಾಗಿ ತಿಳಿಸಿದರು.
ಮಗುವಿನ ತಂದೆ ನಾಳೆಯೇ ಶಾಲೆಗೆ ಕಳುಹಿಸುತ್ತೇನೆ ಎಂದರೆ, ತಾಯಿ ಯಾವುದೇ ಕಾರಣಕ್ಕೂ ಕರೊನಾ ಸೋಂಕು ಕಡಿಮೆಯಾಗುವವರೆಗೆ ಕಳುಹಿಸುವುದಿಲ್ಲ ಎಂಬ ಹೇಳಿಕೆ ನನಗೆಗಡಲಲ್ಲಿ ತೇಲಿಸಿತು.
ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿಗಳಾದ ಯೋಗೇಶ್, ತ್ಯಾಗರಾಜ್, ಮುಖ್ಯಶಿಕ್ಷಕ ರಮೇಶ್, ಶಾಲಾ ಅಭಿವೃದ್ಧಿ ಸಮಿಸಿ ಅಧ್ಯಕ್ಷೆ ಗೌರಮ್ಮ ಇತರರು ಇದ್ದರು.