

ರಾಯಚೂರು ರಾಯಚೂರು ಗಂಜ್ ಹಮಾಲರ ಸಂಘದ ಸಭೆ ನಗರದ ಗಂಜ್ ಆವರಣದಲ್ಲಿ ಶನಿವಾರ ಜರುಗಿತು.
ಈ ಸಭೆಯಲ್ಲಿ ಹಮಾಲರ ಹಮಾಲಿ ಹೆಚ್ಚಳ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಎಲ್ಲವೂ ಹೆಚ್ಚಳ ಗೊಂಡಿವೆ. ಈ ಅನುಪಾತದಲ್ಲಿ ಹಮಾಲಿ ಹೆಚ್ಚಿಸಬೇಕೆ ಎನ್ನುವ ಬೇಡಿಕೆ ಮುಂದೂಡಲಾಗಿತ್ತು. ಶೇ ೨೫ರಷ್ಟು ಹಮಾಲಿ ಬೆಲೆ ಹೆಚ್ಚಿಸು ವಂತೆಕೋರಲಾಗಿತ್ತು. ಬೆಲೆ ಹೆZ್ಚÀಳಕ್ಕೆ ಸಂಬAಽಸಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಗಂಜ್ ಆವರಣದಲ್ಲಿ ಹಮಾಲರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯಗಳ ನಿರ್ಮಾಣಕ್ಕಾಗಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಹಮಾಲರಿಗೆ ನೀಡಬೇಕಾದ ಸೌಲಭ್ಯಗಳ ಕುರಿತು ಮಾಜಿ ಶಾಸಕ ಎ.ಪಾಪಾರೆಡ್ಡಿ ,ಕಾರ್ಯದರ್ಶಿ ವಿ.ಲಕ್ಷ್ಮೀ ರೆಡ್ಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬೆಲ್ಲಂ ನರ್ಸರ ರೆಡ್ಡಿ, ಬೆಟ್ಟಪ್ಪ ,ಸೇರಿದಂತೆ ಇನ್ನಿತರರು ಇದ್ದರು.