

ರಾಯಚೂರು ಸಂವಿದಾನದ ಕಾಯ್ದೆ ೨೩ ವಿಽ ಹೇಳುತ್ತದೆ ಯಾವುದೇ ಕಾರಣಕ್ಕೆ ಎಸ್ಟಿ,ಎಸ್ಸಿ ಸಮುದಾಯದ ಅನುದಾನ ಬಳಕೆ ಮಾಡಬಾರದೆಂದು ಗೊತ್ತಿದ್ದರು ಸಹ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ದರ್ಬಳಕೆ ಮಾಡಿಕೊಂಡಿದೆAದು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಆರೋಪಿಸಿದರು.
ನಗರದ ಜಿಲ್ಲಾ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗೆ ಎಸ್‌ಟಿಎಸ್‌ಪಿ ಮತ್ತು ಟಿಎಸ್ಪಿ ಅನುದಾನ ದುರ್ಬಳಕೆ ಖಂಡಿಸಿ ಜಿ¯್ಲÁ ಬಿಜೆಪಿಯಿಂದ ಬೃಹತï ಜನದೋಲನ ಪ್ರತಿಭಟನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯದಲ್ಲಿ ಮೊದಲ ಬಾರಿಗೆ ದಲಿತ ಸಮುದಾಯದ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಯಿ ಮಾಡಿದ್ದಾರೆ. ರಾಜ್ಯದಲ್ಲಿ ದಲಿತ ಸಮುದಾಯದ ಎಸ್‌ಟಿಎಸ್‌ಪಿ ಮತ್ತು ಟಿಎಸ್ಪಿ ಅನುದಾನ ದುರ್ಬಳಕೆಯಾಗುತ್ತಿದ್ದು ಯಾರು ಕ್ರಮ ಕೈಗೊಳ್ಳುತ್ತಿಲ್ಲ. ಗ್ಯಾರೆಂಟಿ ಯೋಜನೆಗಳನ್ನು ಎಲ್ಲ ಸಮುದಾಯಗಳಿಗೆ ನೀಡುತ್ತಿರಿ ಆದರೆ ಎಸ್ಟಿ,ಎಸ್ಸಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದು ನಮ್ಮ ವಿರೋಧವಾಗಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಅಲ್ಪ ಸಂಖ್ಯಾತರ ಅನುದಾನವನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ದಲಿತ ಸುಮುದಾಯದ ಮಹಾನ್ ನಾಯಕರಿಗೆ ಒಂದು ಕಪ್ಪು ಚುಕ್ಕೆ ಬಂದರೆ ಸಾಕು ರಾಜ್ಯದಲ್ಲಿ ಹೋರಾಟ ಮಾಡುತ್ತಾರೆ ಆದರೆ ಸ್‌ಟಿಎಸ್‌ಪಿ ಮತ್ತು ಟಿಎಸ್ಪಿ ಅನುದಾನ ದುರ್ಬಳಕೆ ಮಾಡಿದರು ಯಾವುದೇ ಕ್ರಮವಾಗದೆ ಇರುವುದು ಶೋಚಾನಿಯ ಸಂಗತಿಯಾಗಿದೆ..ಈ ಆಂದೋಲನಾ ಸರ್ವ ಜನಾಂಗದ ಆಂದೋಲನ ಆಗಬೇಕು ಎಂದರು.
ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ,ರಾಜ್ಯ ಬಿಜೆಪಿ ಸರ್ಕಾರವನ್ನು ದಲಿತರ ವಿರೋಽ ಸರ್ಕಾರ ಎಂದರೆ ತಪ್ಪಾಗುವುದಿಲ್ಲ. ಇವರು ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡದೆ ಕೇವಲ ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ನೀಡಿ ಅಭಿವೃದ್ದಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಜನರಿಗೆ ಮಂಕು ಬೂದಿ ಹಾಕುತ್ತಿz್ದÁರೆ. ರಾಜ್ಯದಲ್ಲಿ ದಲಿತರಿಗೆ ಅನುಕೂಲವಾಗಲು ಅನೇಕ ನಾಯಕರು ಅನುದಾನ ಜÁರಿ ಮಾಡಲು ಕಾನೂನು ರೂಪಿಸಿz್ದÁರೆ. ಆದರೆ ರಾಜ್ಯ ಕಾಂಗ್ರೆಸ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿz್ದÁರೆ. ಅದರಿಂದ ಕೂಡಲೇ ಸರ್ಕಾರ ರಾಜೀನಾಮೆ ನೀಡಿ ದಲಿತರಿಗೆ ಕ್ಷೇಮ ಕೇಳಬೇಕು ಎಂದು ಒತ್ತಾಯ ಮಾಡುತ್ತಿದ್ದೇನೆ ಎಂದರು.
ಮಾಜಿ ಸಂಸದ ಕೆ.ವೀರುಪಾಕ್ಷಪ್ಪ ಮಾತನಾಡಿದರು.
ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ವೀರಶೈವ ಕಲ್ಯಾಣ ಮಂಟಪದಿAದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ,,ರವೀAದ್ರ ಜಲದರ, ಶರಣಮ್ಮ ಕಾಮರೆಡಿ, ಸಂತೋಷ ರಾಜಗುರು, ಯಲ್ಲಪ್ಪ,ಅಮರೇಶ, ಸಂತೋಷ ಸೇರಿ ಅನೇಕರು ಇದ್ದರು.