

ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸೋಮವಾರದಂದು ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಂಕರ್ಸ್ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಸಿ, ಹಲವು ಪ್ರಮುಖ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ರೈತರ ಮತ್ತು ಬಡಜನರ ಕಟ್ ಬಾಕಿ ಆಗಿದ್ದವರಿಗೆ ಸಾಲ ಮುಕ್ತರನ್ನಾಗಿ ಮಾಡುವ ಉದ್ದೆಶದಿಂದ ’ಒನ್ ಟೈಮ್ ಸೆಟ್ಲಮೆಂಟ್’ (ಒಟಿಸಿ) ಅಭಿಯಾನದಡಿ ಸಾಲಮುಕ್ತರನ್ನಾಗಿ ಮಾಡಿದವರಿಗೆ ಮರು ಹಣಕಾಸು ಸೌಲಭ್ಯ ಒದಗಿಸಲು ಬ್ಯಾಂಕ್ಗಳಿಗೆ ತಿಳಿಸಲಾಯಿತು. ಈಗಾಗಲೇ ಎಸ್ಬಿಐ ಮತ್ತು ಕೆವಿಜಿ ಬ್ಯಾಂಕ್ ಮರುಸಾಲ ನೀಡುತ್ತಿದ್ದು, ಉಳಿದ ಬ್ಯಾಂಕ್ಗಳು ಸಹ ಕಡ್ಡಾಯವಾಗಿ ಮರು ಹಣಕಾಸು ಸೌಲಭ್ಯ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಯಾವುದೇ ಸಮಾಜಿಕ ಭದ್ರತಾ ಯೋಜನೆ ಅಡಿ ಬಂದ ಧನಸಹಾಯವನ್ನು ಯಾವುದೇ ಕಾರಣಕ್ಕೂ ರೈತರ ಬ್ಯಾಂಕಿನ ಸಾಲದಲ್ಲಿ ಮುರಿದುಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಸಚಿವ ಜೋಶಿ, ಕೇಂದ್ರ ಸರ್ಕಾರದ ಮುದ್ರಾ, ಪಿಎಂಇಜಿಪಿ ಮುಂತಾದ ಆರ್ಥಿಕ ಯೋಜನೆಗಳನ್ನ ವಿಳಂಬ ಮಾಡದೇ ತಕ್ಷಣದಿಂದ ಜಾರಿಗೆ ತರಲು ಸೂಚಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ವರೂಪ ಟಿ. ಕೆ. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.