

ಸೋಮವಾರಪೇಟೆ: ನಾವು ಪ್ರತಿಷ್ಠಾನ ಮತ್ತು ಸಿ.ಎಂ.ಸಿ.ಎ ಸಂಸ್ಥೆಯ ಸಹಯೋಗದಲ್ಲಿ ಪಂಚಾಯತ್ ರಾಜ್ ಇಲಾಖೆ ನಡೆಸುವ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ಪರಿಣಾತ್ಮಕವಾಗಿ ನಡೆಸುವ ನಿಟ್ಟಿನಲ್ಲಿ ಪೂರ್ವ ತಯಾರಿಯ ಸಭೆ ಮಾಲಂಬಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಗುರುವಾರ ನಡೆಯಿತು.
ಮಕ್ಕಳ ಹಕ್ಕುಗಳಲ್ಲಿ ಒಂದಾದ ಭಾಗವಹಿಸುವ ಹಕ್ಕಿನ ಮಹತ್ವ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳ ಧ್ವನಿಯ ಪ್ರಾಮುಖ್ಯತೆ, ಮಕ್ಕಳ ಕಾನೂನು ಕಾಯ್ದೆಗಳ ಅರಿವು ನಾವು ಪ್ರತಿಷ್ಠಾನದ ಸ್ವಯಂಸೇವಕರಾದ ಬಿ.ಕೆ.ಕುಮಾರಿ ಮಕ್ಕಳಿಗೆ ತಿಳಿಸಿಕೊಟ್ಟರು.
ಶಾಲಾ ಶಿಕ್ಷಕರಾದ ವಿಜಯೇಂದ್ರ, ವೀಣಾ, ಮಂಜುಳಾ ಸುಮಾ, ಚೈತ್ರ, ಇಂದ್ರಾಣಿ ಇದ್ದರು.