

ಚಾಮರಾಜನಗರ : ವರ್ತಕರ ಸೌರ್ಹಾದ ಸಹಕಾರಿ ಸಂಘವು ಪ್ರಸ್ತುತ ವರ್ಷದಲ್ಲಿ ಉತ್ತಮ ವಹಿವಾಟು ನಡೆಸಿ 33.87 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 20 ರಷ್ಟು ಡಿವಿಡೆಂಟನ್ನು ಉಳಿತಾಯ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ವರ್ತಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪದ್ಮ ಪ್ರಸಾದ್ ತಿಳಿಸಿದರು.
ನಗರದ ವರ್ತಕರ ಭವನದಲ್ಲಿ ಚಾಮರಾಜನಗರ ವರ್ತಕರ ಸೌಹಾರ್ದ ಸಹಕಾರಿ ಸಂಘ ಭಾನುವಾರ ಆಯೋಜಿಸಿದ್ದ 8ನೇ ವಾರ್ಷಿಕ ಸಾಮನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ರೀತಿಯ ಯೋಜನೆಗಳಲ್ಲಿ 4.14 ಕೋಟಿ ರೂ. ಸಾಲ ನೀಡಲಾಗಿದೆ. ಸುಮಾರು 15.5 ಕೋಟಿ ವಾರ್ಷಿಕ ವಹಿವಾಟು ಮಾಡಲಾಗಿದೆ. ಸಹಕಾರಿ ಆರ್ಥಿಕ ವ್ಯವಹಾರಗಳು ಅತ್ಯಂತ ಪಾರದರ್ಶಕತೆಯಿಂದ ಕೂಡಿದ್ದು ಸಾಲ ನೀಡುವಿಕೆ, ಠೇವಣಿ ಸಂಗ್ರಹಿಸುವಿಕೆಯಲ್ಲಿ ಪರಿಣಾಮಕಾರಿಯಾದ ನೀತಿಯನ್ನು ಅನುಸರಿಸಲಾಗುತ್ತಿದೆ. ಸಹಕಾರಿ ಬೆಳವಣಿಗೆ ಆರ್ಥಿಕ ಭದ್ರತೆ ಹಿತ ದೃಷ್ಠಿಯಿಂದ ಭದ್ರತಾ ಸಾಲಗಳಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಗ್ರಾಹಕ ವ್ಯವಹಾರದ ಕುರಿತು ಎಸ್‌ಎಂಎಸ್ ಸೇವೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದಿಂದ ಆರ್ಥಿಕ ಚಟುವಟಿಕೆ ಅಷ್ಟೇ ಅಲ್ಲದೆ ಸೇವಾ ಮನೋಭಾವನೆಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಈ ಸಾಲಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಇಟಿ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ನಮ್ಮ ಸಹಕಾರಿಯ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೇಣುಗೋಪಾಲ್. ಕ್ರೀಡಾ ಕ್ಷೇತ್ರದ ಶಿವು, ಸಂಘದ ಕಾನೂನು ಸಲಹೆಗಾರ ಎ.ಎಸ್.ವಿಜಯಕುಮಾರ್, ಲೆಕ್ಕ ಪರಿಶೋಧಕ ಕೆ.ಕೇಶವಡೋಂಗ್ರೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್. ಬಾಲಸುಬ್ರಮಣ್ಯ, ಉಪಾಧ್ಯಕ್ಷ ಬಿ.ವಿ.ವೆಂಕಟನಾಗಪ್ಪಶೆಟ್ಟಿ,
ಮುಖ್ಯನಿರ್ವಾಹಕ ಬಿ.ಜಿ.ಸಂಕೀರ್ತನ್, ನಿರ್ದೇಶಕ ಸಿ.ಎಸ್.ಮಹೇಶ್‌ಕುಮಾರ್, ಎಸ್. ಬಾಲಸುಬ್ರಮಣ್ಯ, ಕೆ.ಎಸ್.ಚಿದಾನಂದಗಣೇಶ್, ಸಿ.ಎ.ನಾರಾಯಣ್, ಸಿ.ವಿ.ಶ್ರೀನಿವಾಸ್, ವರ್ತಕರ ಸಂಘದ ಅಧ್ಯಕ್ಷ ಎಚ್.ಬಿ.ರಾಜಶೇಖರ್, ಎನ್.ಶ್ರೀಕಂಠಮೂರ್ತಿ, ಎಂ.ಕಮಲ್‌ರಾಜ್, ಎಂ.ರಾಜಣ್ಣ, ಸಿ.ಎಸ್.ಮಹೇಶ್‌ಕುಮಾರ್, ಡಿ.ಎಸ್.ರಾಘವೇಂದ್ರ, ರಾಮಚಂದ್ರ, ಎಸ್.ವಿ. ಗಣೇಶ್, ಸಿ.ಪಿ.ಗಣೇಶ್, ಸಿ.ಪಿ.ಮಧುಸೂಧನ್, ಜಿ.ಆರ್.ರೇಖಾ ಶ್ರೀಧರ್, ಎಸ್.ಪುಷ್ಪ, ಶ್ರೀನಿವಾಸ್, ಸಿ.ಬಿ.ಪ್ರಭುಸ್ವಾಮಿ ಉಪಸ್ಥಿತರಿದ್ದರು.