ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರಿಸಿ

bir 1 (3)
Published on

ಬೀರೂರು: ರಾಷ್ಟ್ರವ್ಯಾಪಿ ಕೃಷಿ ಹಾಗೂ ಗ್ರಾಮೀಣ ಕಾರ್ಮಿಕ ಸಂಘಟನೆಗಳ ಸಹಯೋಗದಲ್ಲಿ 10 ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿದ್ದ ಮುಷ್ಕರಕ್ಕೆ ಬೀರೂರು ಗ್ರಾಮೀಣ ಅಂಚೆ ನೌಕರರು ಬೆಂಬಲ ಸೂಚಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮೀಣ ಅಂಚೆ ನೌಕರರನ್ನು ಇಲಾಖೆ ನೌಕರರಂತೆ 8ನೇ ವೇತನ ಆಯೋಗದ ಪರಿಮಿತಿಗೆ ತರುವುದು, ಅವೈಜ್ಞಾನಿಕ ಐಡಿಸಿಡೆಲಿವರಿ ನೀತಿ, ಟಾರ್ಗೆಟ್ ಪದ್ದತಿ ರದ್ದುಪಡಿಸಬೇಕು, ಗ್ರಾಮೀಣ ಅಂಚೆ ನೌಕರರಿಗೆ ಇಲಾಖೆ ನೌಕರರಿಗೆ ನೀಡುವ ಸವಲತ್ತುಗಳನ್ನು ನೀಡಬೇಕು,ಕುಟುಂಬ ಹಾಗೂ ನೌಕರರಿಗೆ ವೈದ್ಯಕೀಯ ವೆಚ್ಚ , ಮಕ್ಕಳಿಗೆ ಶಿಕ್ಷಣ ಭತ್ಯೆ ನೀಡಬೇಕು. ಗ್ರಾಮೀಣ ಅಂಚೆ ಮಹಿಳಾ ನೌಕರರಿಗೂ ಹೆರಿಗೆ ರಜೆ, ನಿವೃತ್ತಿ ನಂತರ ಮಾಸಿಕ ಪಿಂಚಣಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಅಂಚೆ ನೌಕರರಾದ ಕಾಮನಕೆರೆ ಪರ್ವತಪ್ಪ, ಕುಡ್ಲೂರಿನ ವಿನಾಯಕ್, ಬಳ್ಳಿಗನೂರಿನ ಗಂಗಾಧರಪ್ಪ, ಬೀರೂರು ಪಟ್ಟಣದ ಸುನಿಲ್,ಅಭಿಷೇಕ್, ಬಿಸಲೇರಿಯ ವಿಠ್ಠಲ್, ಮಚ್ಚೆರಿ ಮಂಜಪ್ಪ, ಮುಂಡ್ರೆ ಹಾಗೂ ಹೋಗರೆಹಳ್ಳಿಯ ಅರ್ಪಿತಾ ಹಾಗೂ ರಕ್ಷಿತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net