ಅಕ್ರಮ ಮಾಂಸ ಸಾಗಣೆ ವಿರುದ್ಧ ಕ್ರಮವಾಗಲಿ

meet issue memorandum submission in koppal
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಿಂದು ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ಸೋಮವಾರ ಡಿಸಿ ಕಚೇರಿ ನೌಕರ ರವಿ ವಸ್ತ್ರದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಸಮಿತಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಪಿ.ಮಡಿವಾಳರ, ಗುರುನಾಥ್​ ಜಿ. ಮಡಿವಾಳರ, ಪ್ರಕಾಶ್​ ಗೌಡರ, ರಾಜು ಧರೆಯಣ್ಣನವರ ಇದ್ದರು.
Published on

ಕೊಪ್ಪಳ: ಅಕ್ರಮ, ಕಳಪೆ ಮಾಂಸ ಸಾಗಣೆ ತಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಿಂದು ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್​ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿಗೆ ವಿವಿಧೆಡೆಯಿಂದ ಅಕ್ರಮ ಮಾಂಸ ಸರಬರಾಜಾಗುತ್ತಿದೆ. ಕಳಪೆಯಾಗಿದ್ದು, ಕೆಟ್ಟ ಮಾಂಸ ಪೂರೈಕೆಯಾಗುತ್ತಿದೆ. ಆಹಾರ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ದಂಧೆ ನಡೆಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಮಾಂಸ ಮಾರಾಟಗಾರರು ಈ ಬಗ್ಗೆ ಹಲವು ತಿಂಗಳ ಹಿಂದೆಯೇ ಮಾಹಿತಿ ನೀಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಜು.26ರಂದು ಸಾರ್ವಜನಿಕರು ದೂರಿದ ಮೇಲೆ ಆಹಾರ ಅಧಿಕಾರಿಗಳು ಮಾಂಸದ ಮಾದರಿ ಪಡೆದಿದ್ದಾರೆ. ಈ ವೇಳೆ ಮಾದರಿ ಪಡೆಯಲು ಅಡ್ಡಿಪಡಿಸಲಾಗಿದೆ. ಈ ಬಗ್ಗೆ ಧ್ವನಿ ಎತ್ತಿದ್ದ ಹಿಂದು ಕಾರ್ಯಕರ್ತ ಪುನೀತ್​ ಕೆರೆಹಳ್ಳಿ ಮೇಲೆ ದೌರ್ಜನ್ಯ ಎಸಗಲಾಗಿದೆ. ಡರಾಮನ ಇತಿಹಾಸ ಇರುವ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಣ ಎಂದು ಮರು ನಾಮಕರಣ ಮಾಡಲಾಗುತ್ತದೆ ಎಂದು ಆರೋಪಿಸಿದರು.

ಅಕ್ರಮ ಮಾಂಸ ದಂಧೆ ತಡೆಯಬೇಕು. ಪುನೀತ್​ ಕೆರೆಹಳ್ಳಿ ಮೇಲೆ ದೌರ್ಜನ್ಯ ನಡೆಸಿದ ಎಸಿಪಿ ಚಂದನ್​ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಣ ಜಿಲ್ಲೆ ಎಂದು ಮರು ನಾಮಕರಣ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಸಮಿತಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಪಿ.ಮಡಿವಾಳರ, ಗುರುನಾಥ್​ ಜಿ. ಮಡಿವಾಳರ, ಪ್ರಕಾಶ್​ ಗೌಡರ, ರಾಜು ಧರೆಯಣ್ಣನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net