ಕೊಡಗು ವಿವಿ ಉಳಿಸುವಂತೆ ಒತ್ತಾಯ

meet
Published on

ಕುಶಾಲನಗರ:

ತೊರೆನೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳುವಾರ ಗ್ರಾಮದಲ್ಲಿರುವ ಕೊಡಗು ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಮುಚ್ಚುವ ಹುನ್ನಾರ ನಡೆಸುತ್ತಿರುವ ವಿಷಯ ಚರ್ಚೆಯಾಗಿ ಕೊಡಗು ವಿವಿ ಮುಚ್ಚದಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಯಿತು. ಈ ಸಂಬAಧ ಜಿಲ್ಲಾಧಿಕಾರಿ, ತಾಲೂಕು ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ಹೇರಲೂ ತೀರ್ಮಾನಿಸಲಾಯಿತು.

ನಂತರ ಸಭೆಗೆ ಬಂದ ವಿವಿಧ ಅರ್ಜಿಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. 15ನೇ ಹಣಕಾಸು ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ತೀರ್ಮಾನಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ದೀಪ ಅಳವಡಿಸಲು ಮತ್ತು ಮುಂದಿನ ಬೇಸಿಗೆಗೆ ಕುಡಿಯುವ ನೀರಿನ ಅಭಾವವಾಗದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಸÀರ್ಕಾರದ ಹೊಸ ಯೋಜನೆಗಳ ಬಗ್ಗೆ ಸಭೆಗೆ ಪಿಡಿಒ ಶ್ಯಾಮ್ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶೋಭಾ ಪ್ರಕಾಶ್ ಮಾತಾನಾಡಿ, ವಿಶ್ವವಿದ್ಯಾಲಯ ಉಳಿಸುವ ಪ್ರಯತ್ನಕ್ಕೆ ಸಹಕಾರ ನೀಡುವುದರ ಜೊತೆಯಲ್ಲಿ ಪ್ರತಿಭಟನೆಗೂ ಸಹ ಮುಂದಾಗಬೇಕೆAದರು.

ಉಪಾಧ್ಯಕ್ಷೆ ರೂಪಾ ಮಹೇಶ್, ಸದಸ್ಯರಾದ ದೇವರಾಜ್, ಬೇಬಿ, ಶಿವಕುಮಾರ್, ಮಹದೇವ, ಪ್ರಕಾಶ್, ಯಶೋಧ, ಸಾವಿತ್ರಿ, ನಿಂಗಾಜಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net