ಕೊಡಗಿನ ಭೂ ಕಂದಾಯ ಬಗ್ಗೆ ಸಭೆ

meet
Published on

ಮಡಿಕೇರಿ:

ಕೊಡಗು ಜಿಲ್ಲೆಗೆ ಸಂಬಂಧಿಸಿದ 2025ನೇ ಸಾಲಿನ ರ‍್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ವಿಧೇಯಕ ಪರಿಶೀಲನಾ ಸಮಿತಿಯ ಮೊದಲ ಸಭೆ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧ್ಯಕ್ಷತೆಯಲ್ಲಿ, ವಿಧಾನ ಸೌಧ ಕೊಠಡಿ ಸಂಖ್ಯೆ 106ರಲ್ಲಿ ಸೋಮವಾರ ನಡೆಯಿತು.

ಈ ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ವಿಧಾನ ಸಭೆಯ ಸದಸ್ಯರುಗಳಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಎಂ.ಟಿ ಕೃಷ್ಣಪ್ಪ, ಅರವಿಂದ ಬೆಲ್ಲದ, ಡಾ. ಶ್ರೀನಿವಾಸ ಎನ್.ಟಿ, ಭೀಮಾಣ್ಣ ಟಿ. ನಾಯ್ಕ ಭಾಗವಹಿಸಿದ್ದರು.

ಕಂದಾಯ ಸಚಿವರು ಈ ತಿದ್ದುಪಡಿ ವಿಧೇಯಕದ ಕುರಿತು ಸಭೆಯಲ್ಲಿ ವಿವರಿಸಿ, ಸಾಧಕ ಬಾಧಕ ಕುರಿತು ಅಧಿಕಾರಿಗಳಿಂದ ವಿವರಣೆ ಪಡೆದರು. ಎ.ಎಸ್ ಪೊನ್ನಣ್ಣ ಅವರು, ಸಭೆಯಲ್ಲಿ ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದಂತೆ ಸಂಪರ‍್ಣವಾಗಿ ವಿವರಿಸಿ, ಮರ‍್ಗೋಪಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂರ‍್ಭದಲ್ಲಿ ಪ್ರಾದೇಶಿಕ ಆಯುಕ್ತರಾದ ಶ ಆದಿತ್ಯ ಆಮ್ಲ ಬಿಸ್ವಾಸ್, ಅಪರ ಮುಖ್ಯ ಕರ‍್ಯರ‍್ಶಿಗಳು ಕಂದಾಯ ಇಲಾಖೆ (ರ‍್ಚುವಲ್ ಮೂಲಕ), ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಅಧಿಕಾರಿಗಳು, ವಿಧಾನ ಸಭೆಯ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net