

ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಸುತ್ತಮುತ್ತಲಿನ ಶಿರಹೂಳಲು, ಹುದುಗೂರು, ಗ್ರಾಮಗಳ ಶೀತ ಪೀಡಿತ ಗ್ರಾಮಸ್ಥರ ಸಭೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಹುದುಗೂರು ಕ್ರೀಡಾ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಹಾರಂಗಿ ನಾಲೆಗಳ ಹಾಗೂ ಉಪ ನಾಲೆಗಳ ದುರಸ್ತಿ, ಅಚ್ಚುಕಟ್ಟು ಪ್ರದೇಶದ ನೀರಿನ ಸದ್ಬಳಕೆ ಮತ್ತು ನಿರ್ವಹಣೆ, ನೀರು ಬಳಕೆದಾರರು ಹಾಗೂ ಕಾಡಾ ಸದಸ್ಯರ ಸಮಸ್ಯೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಯಿತ, ಸಭೆಯಲ್ಲಿ ಹಾಜರಿದ್ದ ಹುದುಗೂರು ವ್ಯಾಪ್ತಿಯ ಗ್ರಾಮಸ್ಥರು ಗ್ರಾಮದ ಸಮಸ್ಯೆಗಳನ್ನು ಶಾಸಕರ ಮುಂದೆ ಸವಿಸ್ತಾರವಾಗಿ ವಿವರಿಸಿದರು.
ಕಾಡಾನೆಗಳ ಹಾವಳಿ, ರಸ್ತೆಯ ದುರಸ್ತಿ, ಗೋ ಸದನ, ಹುದುಗೂರು ಗ್ರಾಮದಲ್ಲಿರುವ ಪಶುವೈದ್ಯ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಚರ್ಚೆಗಳು ನಡೆದವು .
ನಂತರ ಮಾತಾನಾಡಿದ ಶಾಸಕ ಡಾ. ಮಂತರ್ ಗೌಡ ನಾಲೆಗಳ ಅಭಿವೃದ್ಧಿಗೆ ಈಗಾಗಲೇ ಕ್ರಿಯಾ ಯೋಜನೆ ಅನುಗುಣವಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಮುಂದಿನ ದಿನಗಳಲ್ಲಿ ಗ್ರಾಮ ವ್ಯಾಪ್ತಿಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನ ಮಾಡಲಾಗುವುದು. ಮಾವಿನಹಳ್ಳ ವ್ಯಾಪ್ತಿಯ ಗ್ರಾಮಸ್ಥರ ಸಮಸ್ಯೆಯನ್ನು ವಿಶೇಷ ಸಭೆ ಕರೆದು ಬಗೆಹರಿಸಲಾಗುವುದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ನೀರಾವರಿ ಸಲಹಾ ಸಮಿತಿ ಸದಸ್ಯ ಟಿ.ಕೆ. ಪಾಂಡುರAಗ, ಉಮಾ ಪ್ರಭಾಕರ್, ಸುಬ್ಬಣ್ಣ, ಮುಸ್ತಫಾ, ಗೋಪಾಲಕೃಷ್ಣ, ಕಾವೇರಿ ನೀರಾವರಿ ನಿಗಮದ ಹಾರಂಗಿ ವೃತ್ತದ ಅಧೀಕ್ಷಕ ಅಭಿಯಂತರ ಸತೀಶ್, ಕಾರ್ಯಪಾಲಕ ಅಭಿಯಂತರ ಐ. ಕೆ. ಪುಟ್ಟಸ್ವಾಮಿ, ನೀರು ಬಳಕೆದಾರರ ಮಹಾಮಂಡಲದ ಅಧ್ಯಕ್ಷ ಚೌಡೇಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪ್ರೇಮಲೀಲಾ, ನೀರು ಬಳಕೆದಾರ ಸಂಘದ ಮಾಜಿ ಅಧ್ಯಕ್ಷ ಐ. ಎಸ್ ಗಣೇಶ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಟಿ.ಪಿ. ಹಮೀದ್, ಪ್ರಮುಖರಾದ ಮಂಜುನಾಥ, ಪ್ರಕಾಶ್, ಶರತ್, ಖಾದರ್, ರವಿ, ಇಂಜಿನಿಯರ್ ಸೌಮ್ಯ ಮತ್ತಿತರರು ಇದ್ದರು.