

ಕುಶಾಲನಗರ:
ಕುಶಾಲನಗರ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಒಳಚರಂಡಿ ಯೋಜನೆ ಬಗ್ಗೆ ಸದಸ್ಯರು ಪ್ರಮುಖವಾಗಿ ಚರ್ಚೆ ನಡೆಸಿದರು. ಪ್ರತಿ ಸಭೆಯಲ್ಲೂ ಯುಜಿಡಿ ಅಧಿಕಾರಿಗಳು ಒಂದಿಲ್ಲೊAದು ನೆಪಗಳನ್ನು ಹೇಳಿಕೊಂಡು ದಿನ ದೂಡುತ್ತಿದ್ದಾರೆಯೇ ಹೊರತೂ ಯಾವುದೇ ಪ್ರಯೋಜನ ಆಗಿಲ್ಲ. ಎಂದು ಸದಸ್ಯರು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಉಮೇಶ್ ಚಂದ್ರ, ಪುರಸಭೆ 12 ಲಕ್ಷ ರೂ. ಠೇವಣಿ ಮಾಡಿದ ಕೂಡಲೇ ಹೆಚ್ಚಿನ ಕಾಮಗಾರಿ ನಡೆಸಲಾಗುವುದು. ಜುಲೈ ಅಂತ್ಯಕ್ಕೆ ಯುಜಿಡಿ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.ಮೂರು ತಿಂಗಳ ನಿರ್ವಹಣಾ ವೆಚ್ಚವಾಗಿ ಯುಜಿಡಿ ಅಧಿಕಾರಿಗಳು 12 ಲಕ್ಷ ರೂ. ಕೇಳುತ್ತಿದ್ದಾರೆ. ಆದರೆ ಇದರ ಔಚಿತ್ಯ ಏನಿದೆ ? ಮೂರು ತಿಂಗಳಿಗೆ 12 ಲಕ್ಷದಂತೆ ವರ್ಷಕ್ಕೆ ಸುಮಾರು 50 ಲಕ್ಷ ರೂ. ನಿರ್ವಹಣಾ ವೆಚ್ಚವನ್ನು ಯುಜಿಡಿಗೆ ಪಾವತಿಸುವುದಾರೆ ಈ ಹಣವನ್ನು ಪುರಸಭೆ ಯಾವ ಮೂಲದಿಂದ ಸಂಗ್ರಹಿಸಬೇಕು ಎನ್ನುವುದನ್ನು ಯೋಚಿಸಬೇಕಿದೆ ಎಂದು ಬಹುತೇಕ ಸದಸ್ಯರು ಈ ವೇಳೆ ಸಲಹೆ ನೀಡಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಪ್ರಮೋದ್ ಮುತ್ತಪ್ಪ ಬೇರೆ ಕಡೆ ಯುಜಿಡಿ ನಿರ್ವಹಣೆ ಹೇಗಿದೆ ಎಂದು ಮೊದಲು ಅಧ್ಯಯನ ಮಾಡೋಣ. ನಂತರ ವಿಶೇಷ ಸಭೆ ಕರೆದು ಕುಶಾಲನಗರದಲ್ಲಿ ಯುಜಿಡಿಯನ್ನು ಏನು ಮಾಡಬಹುದು ಎನ್ನುವುದರ ಚರ್ಚೆ ನಡೆಸೋಣ ಎಂದು ಸಲಹೆ ನೀಡಿದರು.
ಲೆಕ್ಕಪತ್ರ ವಿಭಾಗದಲ್ಲಿ 88 ಲಕ್ಷ ರೂ. ವ್ಯತ್ಯಾಸ ಕಂಡುಬAದಿದ್ದು, ಸರಿಪಡಿಸಲಾದ ವಿವರಗಳಿಗೆ ಸಭೆಯ ಅನುಮೋದನೆ ಬಯಸಿ ಮುಖ್ಯಾಧಿಕಾರಿ ವಿಷಯ ಮಂಡಿಸಿದರು. ಆದರೆ ಇದಕ್ಕೆ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಪಟ್ಟಣ ವ್ಯಾಪ್ತಿಯಲ್ಲಿ ಸೆಸ್ಕ್ ಕಾರ್ಯವೈಖರಿ ಬಗ್ಗೆಯೂ ತೀವ್ರ ಟೀಕೆಗಳು ಕೇಳಿಬಂದವು. ಅಪಾಯಕಾರಿ ವಿದ್ಯುತ್ ಕಂಬ ತೆರವು ಮಾಡುವಂತೆ ಹಿಂದಿನ ಹಲವು ಸಭೆಗಳಲ್ಲಿ ಹೇಳಿದರೂ ಪ್ರಯೋಜನ ಆಗಿಲ್ಲ. ಈ ಕಂಬವನ್ನು ನಾಳೆ (ಬುಧವಾರ) ಒಳಗೆ ತೆರವು ಮಾಡದಿದ್ದರೆ ಇಲ್ಲದಿದ್ದರೆ ಪುರಸಭೆ ಎದುರು ಧರಣಿ ನಡೆಸಲಾಗುವುದು ವಿ.ಎಸ್. ಆನಂದ್ ಕುಮಾರ್ ಎಚ್ಚರಿಸಿದರು.
ಸೋಮವಾರಪೇಟೆ ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ ಜಿಲ್ಲೆಯಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆಗೆ ಆಧುನಿಕ ಮೀನು ಮಾರುಕಟ್ಟೆ ಮಂಜೂರಾಗಿದೆ. ಕುಶಾಲನಗರದಲ್ಲಿ ಕಾವೇರಿ ಬಡಾವಣೆಯಲ್ಲಿ 10 ಸೆಂಟ್ ಜಾಗ ಗುರುತಿಸಲಾಗಿದ್ದು ಡಿಪಿಆರ್ ಕೂಡ ಆಗಿದೆ ಎಂದು ಮಾಹಿತಿ ನೀಡಿದರು.
ಎಂ.ಎA. ಪ್ರಕಾಶ್ ಮಾತನಾಡಿ ಗೊಂದಿ ಬಸವನಹಳ್ಳಿ ಶಾಲೆ ತನಕ ಆನೆಗಳು ಬಂದಿದೆ. ಅರಣ್ಯ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. ಮಂಗಗಳ ಹಾವಳಿ ಹೆಚ್ಚಾಗಿದೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೆ.ಆರ್. ರೇಣುಕಾ ಒತ್ತಾಯಿಸಿದರು. ಕುಶಾಲನಗರ ಗಡಿಭಾಗದ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸೇತುವೆಯ ಅತ್ತಕಡೆ ವರ್ಗಾಯಿಸಬೇಕು. ಇದರಿಂದ ಸೇತುವೆ ಮೇಲೆ ಭಾರದ ಲಾರಿಗಳು ನಿಲ್ಲುವುದು ತಪ್ಪಲಿದೆ ಎಂದು ಸಲಹೆ ನೀಡಿದರು. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಸಭೆಯಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಹೇಳಿದರು.
ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಪುಟ್ಟಲಕ್ಷಿö್ಮÃ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಹಾಗೂ ಸದಸ್ಯರು ಇದ್ದರು.