

ಕುಶಾಲನಗರ:
ಹೆಬ್ಬಾಲೆ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾ ಕುಮಾರಿ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಸಭೆ ಆರಂಭ ಆಗುತ್ತಿದ್ದಂತೆಯೇ ಹಿಂದಿನ ಸಭೆಯ ವರದಿ ಮಂಡಿಸುವ ವೇಳೆ ಕಳೆದ ಸಾಲಿನ ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳನ್ನು ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿ ಜಾರಿ ಮಾಡಿಲ್ಲ ಎಂದು ಸದಸ್ಯರಾದ ಹೆಚ್. ಎಸ್. ಮಂಜುನಾಥ, ಮಹದೇವ , ನಾರಾಯಣ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಒತ್ತುವರಿ ಸರ್ಕಾರಿ ಜಾಗ ಸರ್ವೆ ನಡೆಸಿ ಗ್ರಾಮ ಪಂಚಾಯತಿ ಅಸ್ತಿ ಸಂರಕ್ಷಣೆ ಮಾಡಲು ಅಧಿಕಾರಿ ವರ್ಗ ಮುಂದಾಗಬೇಕೆAದು ಒತ್ತಾಯಿಸಿದರು.
ಅಭಿವೃದ್ಧಿ ಪೂರಕವಾದ ಯೋಜನೆಗಳನ್ನು ಕೈಗೊಳ್ಳುವಾಗ ಗ್ರಾಮ ಪಂಚಾಯತಿಯ ವಾರ್ಷಿಕ ಬಜೆಟ್ ಮಂಡನೆ ಮಾಡದೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರ ಸಂಪೂರ್ಣ ಮಾಹಿತಿ ಒದಗಿಸುವಂತೆ ಸದಸ್ಯರು ಪಿಡಿಒ ಅವರನ್ನು ಒತ್ತಾಯ ಮಾಡಿದರು. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಸಭೆಯ ತೀರ್ಮಾನದಂತೆ ಎಲ್ಲಾ ವಾರ್ಡ್ಗಳಲ್ಲಿ ಕ್ರಮಬದ್ಧವಾಗಿ ನಿರ್ವಹಿಸುವ ಮೂಲಕ ಗುಣಮಟ್ಟದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸದಸ್ಯರು ಸಲಹೆ ನೀಡಿದರು.
ಅಧ್ಯಕ್ಷೆ ಅರುಣಾಕುಮಾರಿ ಮಾತಾನಾಡಿ ಸಭೆಯಲ್ಲಿ ಸದಸ್ಯರು ಚರ್ಚೆ ಮಾಡಿದ ಪ್ರಮುಖ ಅಂಶಗಳನ್ನು ತೆಗೆದುಕೊಂಡು ಅದರ ಮುಖೇನ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಖರ್ಚು ವೆಚ್ಚಗಳ ಬಗ್ಗೆ ಸುರ್ಧಿಘವಾದ ಚರ್ಚೆಗಳು ನಡೆದವು. ಸಾರ್ವಜನಿಕರ ಮನವಿಗೆ ಪೂರಕವಾದ ಅಂಶಗಳನ್ನು ಗಮನವಿಟ್ಟು ಅದಕ್ಕೆ ಸಂಬAಧಿಸಿದ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆಗಳು ಆದವು. ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಮೋಹನ್ ಸಭೆಗೆ ಬಂದ ಸಾರ್ವಜನಿಕರ ಅರ್ಜಿಗಳನ್ನು ಗಮನಕ್ಕೆ ತಂದು ಅವುಗಳ ಪರಿಹಾರದ ಬಗ್ಗೆ ವಿಷಯಗಳ ಪ್ರಸ್ತಾಪ ಮಾಡಿದರು.
ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸÀರ್ಕಾರದ ನಿಯಮಾನುಸಾರ, ಮತ್ತು ಅರ್ಹ ಫಲಾನುಭವಿಗಳ ಮುಖೇನ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುಲಾಗುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ತಮ್ಮ ತಮ್ಮ ವಾರ್ಡ್ಗಳ ಮೂಲಭೂತ ಸೌಕರ್ಯಗಳ, ಮತ್ತು ಶುಚಿತ್ವಕ್ಕೆ ಸಂಬAಧಿಸಿದAತೆ ಅನೇಕ ಚರ್ಚೆಗಳನ್ನು ಸಭೆಯಲ್ಲಿ ಸದಸ್ಯರು ನಡೆಸಿದರು.
ಉಪಾಧ್ಯಕ್ಷೆ ಲತಾ, ಸದಸ್ಯರಾದ ಹೆಚ್. ಬಿ. ಚಂದ್ರಶೇಖರ್ ಜೋಗಿ, ಹೆಚ್.ಸಿ. ಮಹದೇವ, ಹೆಚ್. ಪಿ. ತನುಕುಮಾರ್, ರತ್ನಮ್ಮ, ಪರಮೇಶ್, ಹೆಚ್.ಕೆ. ಕವಿತಾ, ಕಾರ್ಯದರ್ಶಿ ಸುರೇಶ್ ಇದ್ದರು.