ಮೇದುರ ಹರೀಶ್ ಸುಬ್ಬಯ್ಯ ಅವಿರೋಧ ಆಯ್ಕೆ

Medura Harish Subbaiah was elected unopposed
Published on

ಮಡಿಕೇರಿ:

ಮಾದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮೇದುರ ಹರೀಶ್ ಸುಬ್ಬಯ್ಯ ಅವಿರೋಧವಾಗಿ ಆಯ್ಕೆ
ಆಗಿದ್ದಾರೆ. ಬುಧವಾರ ಮಾದಾಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಾದಾಪುರ ವಲಯ ಕಾಂಗ್ರೆಸ್ ಉಪಾಧ್ಯಕ್ಷ ರಘು ಕಾಂಡನಕೊಲ್ಲಿ, ಕಾರ್ಯದರ್ಶಿ ನಾಸೀರ್ ಸೀದಿ, ಮಾಜಿ ವಲಯ ಅಧ್ಯಕ್ಷ ದಾದೂ, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎ. ಬಿ. ಉಮ್ಮರ್, ಪಕ್ಷದ ಸದಸ್ಯರಾದ ಬಾಬು ಮೇಸ್ತ್ರಿ, ಸಮದ್ ಮಠ, ಅಜೀಜ್ ಮೇಸ್ತ್ರಿ, ಸಿದ್ದೀಕ್ ಇಬ್ರಾಹಿಂ ಜಾರಕೊಲ್ಲಿ, ಉಬೈದುಲ್ಲಾ, ಅಶ್ರಫ್ ಮುಂತಾದವರು ಸಭೆಯಲ್ಲಿ ಇದ್ದರು.
ಹರೀಶ್ ಸುಬ್ಬಯ್ಯ ಅವರು ಉನ್ನತ ಶಿಕ್ಷಣ ನಂತರ ಸೈನಿಕರಾಗಿ ದೇಶ ಸೇವೆ ಮಾಡಿ, ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿ ಹೊಂದಿ ಸಮಾಜಸೇವೆ, ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net