ಧ್ಯಾನಕ್ಕೆ ಕುಳಿತ ವಿದ್ಯಾರ್ಥಿಗೆ ಮುತ್ತಿಟ್ಟ ಕೋತಿ

26 KAMPLI 01
ಮಲ್ಲಿಕಾರ್ಜುನನನ್ನು ಮುದ್ದಿಸುತ್ತಿರುವ ಕೋತಿ.
Published on

ಕಂಪ್ಲಿ: ಧ್ಯಾನಕ್ಕೆ ಕುಳಿತಿದ್ದ ವಿದ್ಯಾರ್ಥಿಯನ್ನು ಕೋತಿಯೊಂದು ಮುದ್ದಿಸಿರುವ 51 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಲೂಕಿನ ದೇವಲಾಪುರದ ಹೊಸನಗರ ಸಹಿಪ್ರಾ ಶಾಲಾ ಆವರಣದಲ್ಲಿ ಶನಿವಾರ ಮಕ್ಕಳು ಧ್ಯಾನಕ್ಕೆ ಕುಳಿತಿದ್ದ ವೇಳೆ 4ನೇ ತರಗತಿ ಮಲ್ಲಿಕಾರ್ಜುನನ ಪಕ್ಕಕ್ಕೆ ಕೋತಿ ಬಂದಾಗ ಮಕ್ಕಳು ಕಿರುಚಿದ್ದಾರೆ. ಆದರೆ, ಈ ಕೋತಿ ಮಲ್ಲಿಕಾರ್ಜುನನ ಕೆನ್ನೆಸವರಿ, ಕಣ್ಣೀರು ಒರೆಸಿ, ಮುತ್ತಿಟ್ಟು, ಅವನ ಮುಖವನ್ನೇ ನೋಡುತ್ತ ಪಕ್ಕದಲ್ಲೇ ಕುಳಿತಿತ್ತು. ಮುಖ್ಯಶಿಕ್ಷಕಿ ಚನ್ನಬಸಮ್ಮ ಶೆಟ್ರು ‘ಹೆದರಬೇಡ, ಸುಮ್ಮನೆ ಧ್ಯಾನ ಮಾಡು’ ಎಂದು ಧೈರ್ಯ ನೀಡಿ ಬೆತ್ತ ಹಿಡಿದು ಬಂದಾಗ ಕೋತಿ ಅಲ್ಲಿಂದ ಓಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net