

ಹುಬ್ಬಳ್ಳಿ: ನೆಮ್ಮದಿಯ ಬದುಕಿಗೆ ಧ್ಯಾನ ಅವಶ್ಯಕ. ಮಹರ್ಷಿ ವಾಲ್ಮೀಕಿ ಅವರ ಪೂರ್ವದ ಇತಿಹಾಸ ಬದಲಾವಣೆಯಾಗಿದ್ದು ಧ್ಯಾನದಿಂದ ಎಂದು ಆದರ್ಶ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಸುರೇಶ ಕುನ್ನೂರ್ ಹೇಳಿದರು.
ನಗರದ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಹುಣ್ಣಿಮೆ ನಿಮಿತ್ತ ಆಯೋಜಿಸಿದ್ದ ಧ್ಯಾನ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ಧ್ಯಾನದಿಂದ ಆಧ್ಯಾತ್ಮದ ಕಡೆಗೆ ನಡೆಯಬಹುದು ಎಂದರು.
ಪಿರಾಮಿಡ್ ಸೀನಿಯರ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ, ಈಶ್ವರ ಒಂಗಿ, ನೀಲಕಂಠ ಆಕಳವಾಜಿ ಇದ್ದರು. ಪಿರಾಮಿಡ್ ಧ್ಯಾನ ಮಂದಿರದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.