ಹುಬ್ಬಳ್ಳಿ: ಹುಣ್ಣಿಮೆ ಪ್ರಯುಕ್ತ ಉಚಿತ ಸಾಮೂಹಿಕ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮ ಇಲ್ಲಿಯ ನೃಪತುಂಗ ಬೆಟ್ಟದಲ್ಲಿರುವ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ನ. 15ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ.
ಹುಬ್ಬಳ್ಳಿ ಪಿರಮಿಡ್ ಧ್ಯಾನಿಗಳ ಸಂದ ವತಿಯಿಂದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಹಿರಿಯ ಪಿರಮಿಡ್ ಮಾಸ್ಟರ್ ವಿಶಾಲಾ ಆಕಳವಾಡಿ ಅವರು ನೇತೃತ್ವ ವಹಿಸುವರು. ಮೊದಲ ಬಾರಿ ಧ್ಯಾನಕ್ಕೆ ಬರುವವರಿಗೆ ಸಂಜೆ 6.30ಕ್ಕೆ ಮಾಹಿತಿ ತರಬೇತಿ ನೀಡಲಾಗುತ್ತದೆ.
ಹುಣ್ಣಿಮೆ ದಿನ ವಿಶೇಷ ಚೈತನ್ಯ ಶಕ್ತಿ ಇರುವುದರಿಂದ ಅಂದು ಧ್ಯಾನ ಮಾಡಿದರೆ ಅತ್ಯಧಿಕ ಲಾಭ ಸಿಗಲಿದೆ. ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಕೋರಿದ್ದಾರೆ.