ಸಾಧನೆಗೆ ಏಕಾಗ್ರತೆಯಿಂದ ಧ್ಯಾನಮಾಡಿ

Meditate with concentration for achievement
ಬಸವನಬಾಗೇವಾಡಿ ಪಟ್ಟಣದ ಬಸವ ಭವನದಲ್ಲಿ ಮಹಾರಾಜ ಮಠದ ಸಿದ್ಧರಾಮೇಶ್ವರ ಮಹಾರಾಜರ ಪುಣ್ಯ ಸ್ಮರಣೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನಿಧ್ಯವಹಿಸಿ ಕನ್ಹೇರಿ ಮಠದ ಅದಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡುತ್ತಿರುವುದು. ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ ಇತರರಿದ್ದರು.
Published on

ಬಸವನಬಾಗೇವಾಡಿ: ಪ್ರಕತಿ ನಮ್ಮ ಬದುಕಿಗೆ ಬೇಕಾದ ಎಲ್ಲವನ್ನೂ ನೀಡಿದೆ. ಅದಕ್ಕಾಗಿಯೇ ನಾವು ದೇವರನ್ನು ವಿವಿಧ ರೂಪದಲ್ಲಿ ಆರಾಧಿಸುತ್ತಿದ್ದೇವೆ. ದೇವರು ಸರ್ವವ್ಯಾಪಿಯಾಗಿದ್ದಾನೆ. ಏಕಾಗ್ರತೆಯಿಂದ ಧ್ಯಾನದಲ್ಲಿ ತೊಡಗುವ ಮೂಲಕ ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಮಹಾರಾಷ್ಟ್ರದ ಕೊಲ್ಲಾಪುರದ ಕನ್ಹೇರಿ ಮಠದ ಅದಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸೋಮವಾರ ಪಟ್ಟಣದ ವಿಜಯಪುರ ರಸ್ತೆಯ ಬಸವ ಭವನದಲ್ಲಿ ಮಹಾರಾಜ ಮಠದ ಸಿದ್ಧರಾಮೇಶ್ವರ ಮಹಾರಾಜರ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿ, ಹಿಂದು ಧರ್ಮದ ಸಂಸತಿ ಜಗತ್ತಿನಲ್ಲಿಯೇ ವೆಶಿಷ್ಟ್ಯಪೂರ್ಣ. ನಮ್ಮ ಧರ್ಮದಲ್ಲಿ ಅವರ ಭಾವಕ್ಕೆ ತಕ್ಕಂತೆ ದೇವರನ್ನು ಪೂಜಿಸುವ ಸ್ವಾತಂತ್ರ್ಯಕೊಟ್ಟಿದೆ. ದೇವರನ್ನು ಮೂರ್ತಿ, ಪ್ರಾಣಿ, ವ, ಜಲ, ಮಣ್ಣು ಸೇರಿದಂತೆ ವಿವಿಧ ರೂಪದಲ್ಲಿ ಪೂಜಿಸಲಾಗುತ್ತಿದೆ ಎಂದು ಹೇಳಿದರು.

ಸಮಾಜದಲ್ಲಿ ಮೇಲು&ಕೀಳು ಎಂಬ ಬೇಧ ಭಾವ ಹೋಗಲಾಡಿಸಲು ಮಹಾನ್​ ಪುರುಷರು ಶ್ರಮಿಸಿದ್ದಾರೆ. ಇಲ್ಲಿನ ಮಹಾರಾಜ ಮಠದ ಸಿದ್ಧರಾಮೇಶ್ವರರು ಭಾವಸಾರ ಮಹಾರಾಜರಿಂದ ದೀೆ ಪಡೆದರು. ಆಧ್ಯಾತ್ಮದಲ್ಲಿ ಸಾಧನೆ ಮಾಡಿ ಅಪಾರ ಶಿಷ್ಯರಿಗೆ ಬೋಧನೆ ಮಾಡಿದ್ದಾರೆ ಎಂದು ಹೇಳಿದರು.

ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶೀಗಳು ಮಾತನಾಡಿ, ಸಾವಯವ ಕಷಿ, ಗೋಸಾಕಣೆ ಸೇರಿದಂತೆ ಅನೇಕ ರಂಗಗಳಲ್ಲಿ ಕನ್ಹೇರಿ ಪೂಜ್ಯರ ಮಾರ್ಗದರ್ಶನ ತುಂಬಾ ಅಗತ್ಯವಿದೆ. ಇಡೀ ದೇಶ ಇಂತಹ ಪೂಜ್ಯರನ್ನು ಪಡೆದುಕೊಂಡಿರುವುದು ಪುಣ್ಯ. ಮಹಾತ್ಮ ಬಸವೇಶ್ವರರರು ಜಗತ್ತಿಗೆ ಕಾಯಕ ತತ್ವ, ದಾಸೋಹ ತತ್ವ, ಅನುಭಾವ ತತ್ವ ನೀಡಿದರು. ಈ ಪರಂಪರೆಯನ್ನು ವಿಜಯಪುರದ ಸಿದ್ದೇಶ್ವರ ಪೂಜ್ಯರು ನಡೆಸಿಕೊಂಡು ಹೋಗುವ ಮೂಲಕ ಅವರು ಎರಡನೇ ಬಸವೇಶ್ವರರು ಎನಿಸಿಕೊಂಡಿದ್ದರು. ಕನ್ಹೇರಿ ಮಠದ ಅದಶ್ಯಕಾಡಸಿದ್ದೇಶ್ವರ ಪೂಜ್ಯರು ಜನತೆಗೆ ಅನುಭಾವ ನೀಡುತ್ತಿದ್ದಾರೆ ಎಂದರು.

ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ, ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜಿತ ಪಾಟೀಲ ಮಾತನಾಡಿದರು. ಮುಪ್ಪಿನ ಕಾಡಸಿದ್ಧೇಶ್ವರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಗಿರೀಶಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಅಭಯಾನಂದ ಸ್ವಾಮೀಜಿ ಮಾತನಾಡಿದರು.

ಸತ್ಸಂಗ ಕಾರ್ಯಕ್ರಮದಲ್ಲಿ ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು, ಸಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ನಾಯ್ಕೋಡಿ, ವಿನೂತ ಕಲ್ಲೂರ, ಬಸವರಾಜ ಗಚ್ಚಿನವರ, ಶಿವಾನಂದ ತೋಳನೂರ, ಬಸವರಾಜ ಶೆಂಡೆ, ಬಸವರಾಜ ಚಿಂಚೋಳಿ ಮಹಾರಾಷ್ಟ್ರ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಜನರು ಭಾಗವಹಿಸಿದ್ದರು.

ಸಪ್ತಾಹದಂಗವಾಗಿ ಬೆಳಗ್ಗೆ ಮಹಾರಾಜರ ಮಠದಲ್ಲಿ ವಿಶೇಷ ಪೂಜೆ, ಕಾಕಡಾರತಿ, ಭಜನೆ ಜರುಗಿತು. ಸಂಜೆ ಸಿದ್ಧರಾಮೇಶ್ವರ ಮಹಾರಾಜರ ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಪಲ್ಲಕ್ಕಿ ಉತ್ಸವದಲ್ಲಿ ಕನ್ಹೇರಿ ಗುರುಕುಲ ಮಠದ ವಿವಿಧ ಕಲಾ ತಂಡಗಳು ಗಮನಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net