

ಮಸ್ಕಿ: ಪರಮಾತ್ಮನ ಪವಿತ್ರ ದಿನವನ್ನು ಮಹಾ ಶಿವರಾತ್ರಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಮಸ್ಕಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಹೇಮಾವತಿ ಅಕ್ಕ ಹೇಳಿದರು.
ಬಳಗಾನೂರು ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ಮಹಾಶಿವರಾತ್ರಿ ಆಚರಣೆ ಅಂಗವಾಗಿ ಶಿವಲಿಂಗ ಮೆರವಣಿಗೆ ಶಾಂತಿಯಾತ್ರೆಗೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಮಹಾಶಿವರಾತ್ರಿಯಂದು ಪ್ರತಿಯೊಬ್ಬರೂ ಪ್ರತಿಯೊಂದು ಗಳಿಗೆಯಲ್ಲಿ ಜಾಗೃತ ಸ್ಥಿತಿಯಲ್ಲಿದ್ದು ಜಾಗರಣೆ ಮಾಡಬೇಕು. ಭಗವಂತನ ಧ್ಯಾನ ಮಾಡುತ್ತ ಉಪವಾಸವನ್ನು ಆಚರಿಸಬೇಕು. ನಿರಾಕಾರ ಹಾಗೂ ಜೋತಿರ್ಬಿಂದು ಸ್ವರೂಪದಲ್ಲಿರುವ ಪರಮಾತ್ಮನು ಸರ್ವಧರ್ಮದವರು ಒಪ್ಪುವ ಸೃಷ್ಠಿಕರ್ತ. ಪರಮಾತ್ಮನನ್ನು ನೆನಪು ಮಾಡುವುದರಿಂದಲೇ ಸಮಸ್ಯೆಗಳು ದೂರವಾಗುತ್ತವೆ ಎಂದರು.
ಉಪನ್ಯಾಸಕ ಮಲ್ಲಿಕಾರ್ಜುನ, ಶಿಕ್ಷಕಿ ಸುನಿತಾ, ಮುಖಂಡರಾದ ಮಸ್ಕಿಯ ಶಿವಶಂಕ್ರಪ್ಪ ಹಳ್ಳಿ, ಮಂಜುಳಾ ಮಸ್ಕಿ , ನಾಗರತ್ನಾ ಗುತ್ತೇದಾರ ಮಾತನಾಡಿದರು.
ಶಾಂತಿ ಯಾತ್ರೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಈಶ್ವರೀಯ ವಿಶ್ವವಿದ್ಯಾಲಯ ತಲುಪಿತು. ಶಾಂತಿಯಾತ್ರೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಗಮನ ಸೆಳೆದರು.