ಕಣಚೂರು ವೈದ್ಯಕೀಯ ಕಾಲೇಜಿಗೆ ಕಿಮ್ಸ್ ಪಿ.ಜಿ. ಮೆಡಿಕ್ವಿಜ್ ಪ್ರಶಸ್ತಿ

mng-23dec-kanachuru
Published on



ಮಂಗಳೂರು : ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ವತಿಯಿಂದ
ವೈದ್ಯಕೀಯ ಶಾಸ್ತ್ರ ವಿಭಾಗದ ಸ್ನಾತಕೋತರ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ 3ನೇ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ಕಿಮ್ಸ್ ಮೆಡಿಕ್ವಿಜ್‌ನಲ್ಲಿ ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಡಾ.ಅಬ್ಬಾಸ್ ಆಲಿ ಖಾಜಿ ಮತ್ತು ಡಾ.ಅರ್ಫಾಜ್ ಮಹಮ್ಮದ್ ಜೋಡಿ ಪ್ರಥಮ ಸ್ಥಾನ ಗಳಿಸಿದರು.
ಕಣಚೂರು ವೈದ್ಯಕೀಯ ಕಾಲೇಜಿನ ಡಾ.ಮಹಮ್ಮದ್ ಬಿಲಾಲ್ ಹುಸೈನ್ ಮತ್ತು ಡಾ.ಅತಿಬ್ ಅಹ್ಮದ್ ಕೆ.ಎ ಜೋಡಿ ದ್ವಿತೀಯ ಸ್ಥಾನ ಪಡೆದರು. ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆ ಸಮಿತಿಯ ಅಧ್ಯಕ್ಷ ಡಾ.ಮಹಮ್ಮದ್ ಇಸ್ಮಾಯಿಲ್ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಸಂಸ್ಥೆಯ, ವೈದ್ಯಕೀಯ ಅಧೀಕ್ಷಕ ಡಾ, ಹರೀಶ್ ಶೆಟ್ಟಿ, ಪ್ರಾಂಶುಪಾಲ ಡಾ.ರತ್ನಾಕರ , ಸಲಹಾ ಸಮಿತಿಯ ಸದಸ್ಯ
ಡಾ. ಎಂ.ವಿ. ಪ್ರಭು ಉಪಸ್ಥಿತರಿದ್ದರು. ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ರೈ ಡಾ. ದೇವದಾಸ್ ರೈ ಸ್ವಾಗತಿಸಿದರು.
ಶಿಶಿರಾ ಕಾರ್ಯಕ್ರಮ ನಿರೂಪಿಸಿದರು. ಎಂ.ವಿ. ಮಲ್ಯ ಅವರು ಬಹುಮಾನಗಳನ್ನು ಪ್ರಾಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net