ಮೃಗಶೀರ ನಕ್ಷತ್ರದಲ್ಲಿ ಔಷಧ ವಿತರಣೆ 8ರಂದು

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ ಹಾಗೂ ಗಾಂಧಿನಗರದ ಧನ್ವಂತರಿ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಸ್ತಮಾ, ಕೆಮ್ಮು, ಅಲರ್ಜಿ ರೋಗಗಳಿಗೆ ಉಚಿತ ಮಂತ್ರೌಷಧಿ ವಿತರಣೆ ಕಾರ್ಯಕ್ರಮ ಮೃಗಶೀರ ನಕ್ಷತ್ರ ಪ್ರವೇಶದಲ್ಲಿ ಜೂನ್ 8ರಂದು ಬೆಳಗ್ಗೆ 8.30ಕ್ಕೆ ನಡೆಯಲಿದೆ.

ಧನ್ವಂತರಿ ಸೇವಾ ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ ಮೆಣಸಗಿ ಅವರು ಔಷಧಿ ವಿತರಿಸುವರು.
ಮೇಯರ್ ರಾಮಣ್ಣ ಬಡಿಗೇರ ಕಾರ್ಯಕ್ರಮ ಉದ್ಘಾಟಿಸುವರು. ಅಮ್ಮಿನಬಾವಿ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಬೆಂಗಳೂರು ಅಪೋಲೋ ಆಸ್ಪತ್ರೆಯ ಡಾ. ದಯಾನಂದ ಯಲಿಗಾರ ಉಪಸ್ಥಿತರಿರುವರು.

ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net