ಉಚಿತ ಕಣ್ಣಿನ ಔಷಧಿ ವಿತರಣಾ ಕಾರ್ಯಕ್ರಮ

Kabadi Family
Published on

ಸಿದ್ಧಾರೂಢ ಮಠದಲ್ಲಿ ಸದ್ಗುರು ಈಶ್ವರಾನಂದಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಶಿವಾನುಭವ ಹಾಗೂ ಉಚಿತ ಕಣ್ಣಿನ ಔಷಧಿ ವಿತರಣಾ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ದಿವ್ಯ ಸಾನಿಧ್ಯವನ್ನು ಶ್ರೀ ಮಠದ ಪೀಠಾಧಿಪತಿ ಸದ್ಗುರು ಶ್ರೀ ಈಶ್ವರಾನಂದ ಸ್ವಾಮಿಗಳ ವಹಿಸಿ ಮಾತನಾಡಿ, ಎಲ್ಲ ಸದ್ಭಕ್ತರ ಸೇವೆಯಿಂದ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗುತ್ತಿವೆ. ಅದರಂತೆ ಆರೋಗ್ಯ ಕ್ಷೇತ್ರದಲ್ಲಿ ಸೇವಾ ಕಾರ್ಯವಾಗಬೇಕೆಂದು ಸದ್ಗುರು ಸಿದ್ಧಾರೂಢರ ಪ್ರೇರಣೆಯಿಂದ ಪ್ರತಿ ಹುಣ್ಣಿಮೆಯಂದು ಶಿವಾನುಭವದೊಂದಿಗೆ ಉಚಿತ ಕಣ್ಣಿನ ಔಷಧಿ ವಿತರಣೆಯನ್ನು ಶ್ರೀ ಮಠದಿಂದ ಹಮ್ಮಿಕೊಳ್ಳಲಾಗಿದೆ. ಎಲ್ಲ ಸದ್ಭಕ್ತರು ಹಾಗೂ ಸಾರ್ವಜನಿಕರು ಸದಬಳಕೆ ಮಾಡಿಕೊಳ್ಳುತ್ತಿದ್ದು, ಹಾಕಿಸಿಕೊಂಡವರೆಲ್ಲರೂ ಸದ್ಗುರು ಶ್ರೀ ಸಿದ್ಧಾರೂಢರ ಕೃಪಾಶೀರ್ವಾದಿಂದ ಆರಾಮ ಆಗುತ್ತಿದ್ದಾರೆ, ಶ್ರೀ ಮಠದ ಜೀರ್ಣೋದ್ಧಾರಕ್ಕೆ ಎಲ್ಲರ ಸಹಕಾರ ಬಹಳ ಅವಶ್ಯವಿದೆ. ಎಲ್ಲರೂ ಈ ಕಾರ್ಯದಲ್ಲಿ ಕೈ ಜೊಡಿಸಿ ಸದ್ಗುರು ಸಿದ್ಧಾರೂಢರ ಕೃಪಾಶೀರ್ವಾದಕ್ಕೆ ಪಾತ್ರರಾಗಿ ಹಾಗೂ ಈ ಹುಣ್ಣೆಮೆಗೆ ಎಲ್ಲ ರೀತಿದ ಸಹಾಯ-ಸಹಕಾರ ನೀಡಿದ ಎಲ್ಲ ಸದ್ಭಕ್ತರಿಗೂ ಸದ್ಗುರು ಸಿದ್ಧರೂಢರು ಸನಮಂಗಲವನ್ನುAಟು ಮಾಡಲೆಂದು ಆಶೀರ್ವದಿಸಿದರು.

ಪ್ರತಿ ಹುಣ್ಣೆಮೆಯಂದು ಸಿದ್ಧಾರೂಢರ ಜೊಳಿಗೆ ದೇಶಕ್ಕೆಲ್ಲ ಹೋಳಿಗೆ ಎಂಬ ನಾಣ್ನುಡಿಯಂತೆ ಶ್ರೀ ಮಠದಲ್ಲಿ ಶಿವಾನುಭವ ಹಾಗೂ ಹೊಳಿಗೆಯೊಂದಿಗೆ ಮಹಾ ಅನ್ನಸಂತರ್ಪಣೆ ನಡೆಯುತ್ತಿದ್ದು, ಈ ಪ್ರಸಾದ ಸೇವೆಯನ್ನು ಗದುಗಿನ ಶ್ರೀ ಸತೀಶ ಸಿ. ಕಬಾಡಿ, ಸಂತೋಷ ಸಿ. ಕಬಾಡಿ, ಹುಬ್ಬಳ್ಳಿಯ ಶ್ರೀ ಶಿವಯೋಗಿ ಬಸವರಾಜ ಉಳ್ಳಾಗಡ್ಡಿ, ಲಕ್ಷಿ ಶಿವಯೋಗಿ ಉಳ್ಳಾಗಡ್ಡಿಯವರು ವಹಿಸಿಕೊಂಡಿದ್ದರು ಇವರನ್ನು ಶ್ರೀ ಮಠದಿಂದ ಪೂಜ್ಯರು ಸನ್ಮಾನಿಸಿದರು. ಶ್ರೀ ಮಠದ ಜೀರ್ಣೋದ್ಧಾರಕ್ಕೆ ಬೆನಕೊಪ್ಪದ ಶ್ರೀ ಮಲ್ಲಣ್ಣಾ ಬೆಟದೂರ ೨೫,೦೦೧ ರೂ. ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಮುಧೋಳದ ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿಗಳಾದ ಪ.ಪೂ. ಸಿದ್ಧೇಶ್ವರ ಸ್ವಾಮೀಜಿ, ಹಾವೇರಿಯ ಡಾ. ನಾಗರಾಜ ರೊಟ್ಟಿ, ಶ್ರೀ ಸದ್ಗುರು ಈಶ್ವರಾನಂದಸ್ವಾಮಿ ಸೇವಾ ಟ್ರಸ್ಟ್ ಸರ್ವ ಪದಾಧಿಕಾರಿಗಳು, ಶಿಷ್ಯವೃಂದ ಹಾಗೂ ನಾಗಸಮುದ್ರ, ಗದಗ, ಬೆಟಗೇರಿ, ನರಸಾಪೂರ, ಬೆನಕೊಪ್ಪ, ನೀರಲಗಿ, ನಾರಾಯಣಪೂರ, ಕೊಟಮಚಗಿ, ನೇಕಾರ ಕಲೋನಿ, ಚಿಕ್ಕೊಪ್ಪ, ಹಿರೆಕೊಪ್ಪ, ಕಿರಟಗೇರಿ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಹಾಗೂ ಸದ್ಭಕ್ತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಗೆ ಹೊಳಿಗೆ ಸಿಹಿಯೊಂದಿಗೆ ಅನ್ನಸಂತರ್ಪಣೆ ನಡೆಯಿತು. ಭಜನಾ ಹಾಗೂ ಪೂಜಾ ಕಾರ್ಯಕ್ರಮವನ್ನು ಶ್ರೀ ವಿರೂಪಾಕ್ಷಪ್ಪ ಕಾರ್ಮಾತಿ, ತುಕಾರಾಮ ಅಕಲ್ ಹಾಗೂ ಮಂಜುನಾಥ ಕೊಣಿಯವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಮಂಜುನಾಥ ಹದ್ದಣ್ಣವರ ನಿರೂಪಿಸಿದರು, ಪ.ಪೂ. ದಯಾನಂದ ಸ್ವಾಮಿಗಳು ಎಲ್ಲರನ್ನು ಸ್ವಾಗತಿಸಿದರೆ, ಕೊನೆಗೆ ಮೈಲಾರಪ್ಪ ಶೆಡ್ಡಿಯವರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net