ಔಷಧ ವ್ಯಾಪಾರಸ್ಥರಿಗೆ ಸನ್ಮಾನ

3..2
ಶಿರಗುಪ್ಪಿಯಲ್ಲಿ ಹಮ್ಮಿಕೊಂಡಿದ್ದ ಆಧುನಿಕ ದಂತ ಚಿಕಿತ್ಸೆ ಮಾಹಿತಿ ಕಾರ್ಯಕ್ರಮದಲ್ಲಿ ಔಷಧ ವ್ಯಾಪಾರಸ್ಥರನ್ನು ಸನ್ಮಾನಿಸಲಾಯಿತು. ಡಾ.ಅಮೋಲ ಸರಡೆ,ರಾಜಶೇಖರ ಪಾಟೀಲ, ಡಾ.ಸಂಕೇತ ಪಾಟೀಲ ಇತರರಿದ್ದರು.
Published on

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ಹಾಗೂ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಗಾಂ ಮತ್ತು ಶಾಸ್ತ್ರಿ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ದಂತ ಚಿಕಿತ್ಸೆ ಕುರಿತ ಮಾಹಿತಿ ಮತ್ತು ವರ್ಲ್ಡ್ ಫಾರ್ಮಸಿ ಡೇ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು.


ಡಾ.ಅಮೋಲ ಸರಡೆ, ಮಹಾವೀರ ಪಾಟೀಲ, ಅರುಣ ಪಾಟೀಲ ಮಾತನಾಡಿದರು. ಡಾ.ಅಮೋಲ ಸರಡೆ ಮತ್ತು ಅಸೋಸಿಯೇಷನ್ ಅಧ್ಯಕ್ಷ ರಾಜಶೇಖರ ಪಾಟೀಲ, ಸಾಧಕ ಔಷಧ ಅಂಗಡಿಗಳ ಮಾಲಿಕರು, ಗಣ್ಯರು ಹಾಗೂ ದಂತ ವೆದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಂತ ವೈದ್ಯರಾದ ಡಾ.ಸಂಕೇತ ಪಾಟೀಲ ಮತ್ತು ಡಾ.ಪವನ ದೊರಕರ ಆಧುನಿಕ ದಂತ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಡ್ರಗಿಸ್ಟ್ ಅಸೋಸಿಯೇಷನ್ ಉಪಾಧ್ಯಕ್ಷ ತಮ್ಮಣ್ಣ ಕಮತೆ, ಭೀಮಾ ನಿಡಗುಂದೆ, ಇತರರಿದ್ದರು. ಪ್ರಕಾಶ ಹೇಮಗೀರೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net