ಪ್ರಭಾರ ಸಹಾಯಕ ಔಷಧ ನಿಯಂತ್ರಕರಾಗಿ ಷರೀಫ್ ಅಧಿಕಾರ ಸ್ವೀಕಾರ

medicine
Published on

ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ತೆರವುಗೊಂಡಿರುವ ಸಹಾಯಕ ಔಷಧ ನಿಯಂತ್ರಕರಾಗಿ ಮೈಸೂರು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕ ಷರೀಫ್ ಅವರನ್ನ ಪ್ರಭಾರ ಆಗಿ ನಿಯೋಜಿಸಲಾಗಿದೆ.

ಕಳೆದ ಐದು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಹಾಯಕ ಔಷಧ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಮಾಗಣಗೇರಿ ವರ್ಗಾವಣೆ ಹಿನ್ನಲೆ ಷರೀಫ್ ಅವರನ್ನು ನೇಮಿಸಲಾಗಿದೆ. ಮಂಗಳವಾರ ಅಧಿಕಾರ ವಹಿಸಿಕೊಂಡ ಷರೀಫ್ ಅವರಿಗೆ ಕೊಡಗು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಸ್ವಾಗತ ಕೋರಿದರು. ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ನೇತೃತ್ವದಲ್ಲಿ ಸಹಾಯಕ ಔಷಧ ನಿಯಂತ್ರಕ ಷರೀಫ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಕೊಡಗು ಔಷಧ ವ್ಯಾಪಾರಿಗಳ ಸಂಘದ ಹಿರಿಯ ಸದಸ್ಯ ಅಂಬೇಕಲ್ ಕುಶಾಲಪ್ಪ, ಸಂಘದ ಉಪಾಧ್ಯಕ್ಷ ಅಂಬೇಕಲ್ ವಿನೋದ್, ಖಜಾಂಜಿ ಪ್ರಸಾದ್ ಗೌಡ, ಜಂಟಿ-ಕಾರ್ಯದರ್ಶಿ ವಸಂತ್, ಸದಸ್ಯರಾದ ಶಶಿಧರ್ ರೈ, ಧನಂಜಯ ಶಾಸ್ತ್ರೀ, ಸುರೇಶ್ ಬಿಳಿಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net