ಔಷಧ ಸಸ್ಯ ವಿತರಣೆ

Published on

ಹುಬ್ಬಳ್ಳಿ: ಪರಿಸರ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಇಲ್ಲಿಯ ನವನಗರದ ಅಟಲ್ ಬಿಹಾರಿ ವಾಜಪೇಯಿ ಉದ್ಯಾನ ಉಳಿಸಿ ಬೆಳೆಸಿ ಸಮಿತಿ ಮತ್ತು ಭೈರಿದೇವರಕೊಪ್ಪದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಸಾರ್ವಜನಿಕರಿಗೆ ಔಷಧ ಸಸ್ಯಗಳ ಉಚಿತ ವಿತರಣೆ ಕಾರ್ಯಕ್ರಮವನ್ನು ಜೂನ್ 16ರಂದು ಬೆಳಗ್ಗೆ 11ಕ್ಕೆ ಶಿವಾನಂದ ನಗರದ ಶಿವಾನಂದ ಮಠದಲ್ಲಿ ಏರ್ಪಡಿಸಲಾಗಿದೆ.

ನೇಚರ್ ಫಸ್ಟ್ ಇಕೋ ವಿಲೇಜ್ ಅಧ್ಯಕ್ಷ ಪಿ.ವಿ. ಹಿರೇಮಠ ಕಾರ್ಯಕ್ರಮ ಉದ್ಘಾಟಿಸುವರು. ಪಾಲಿಕೆ ಸದಸ್ಯರಾದ ಸುನಿತಾ ಮಾಳವದಕರ, ಚಂದ್ರಶೇಖರ ಮನಗುಂಡಿ, ಪಾಲಿಕೆ ಸಹಾಯಕ ಆಯುಕ್ತ ರಮೇಶ ನೂಲ್ವಿ, ಜಗನಮೋಹನರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ ಅಧ್ಯಕ್ಷತೆ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net