ಅರಳುಮಲ್ಲಿಗೆ ಕೆರೆ ಒಡಲು ಸೇರುತ್ತಿದೆ ಮೆಡಿಕಲ್​ ತ್ಯಾಜ್ಯ

Untitled-3
ದೊಡ್ಡಬಳ್ಳಾಪುರದ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ಮೆಡಿಕಲ್​ ತ್ಯಾಜ್ಯ ಸುರಿದಿರುವುದು.
Published on

ದೊಡ್ಡಬಳ್ಳಾಪುರ : ನಗರ ಹೊರವಲಯದಲ್ಲಿರುವ ಅರಳುಮಲ್ಲಿಗೆ ಕೆರೆಗೆ ಕಿಡಿಗೇಡಿಗಳು ಸುಮಾರು 20 ಚೀಲ ಮೆಡಿಕಲ್​ ತ್ಯಾಜ್ಯ ಎಸೆದಿದ್ದಾರೆ. ಇದರಲ್ಲಿ ಬಳಸಿದ ಸೂಜಿ ಮತ್ತು ಸಿರಿಂಜ್​ಗಳು, ಡ್ರೆಸ್ಸಿಂಗ್​ ಬಟ್ಟೆಗಳು, ರೋಗ ರ್ನಿಣಯದ ಮಾದರಿಗಳು, ಔಷಧಿಗಳು, ವೈದಕೀಯ ಸಾಧನಗಳು ಪತ್ತೆಯಾಗಿದೆ.

ಕೆರೆಯಂಗಳಕ್ಕೆ ಮೆಡಿಕಲ್​ ತ್ಯಾಜ್ಯ ಹಾಕಿರುವುದನ್ನು ಪತ್ತೆ ಮಾಡಿದ ವಿಜಯಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಸಂಟನೆ ಪದಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ನಾಗನಾಥ್​ ಭೇಟಿ ನೀಡಿ ಪರಿಶೀಲನೆ ನಡೆಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಭರವಸೆ ನೀಡಿದರು.

ವೇದಿಕೆ ಮುಖಂಡ ಸತೀಶ್​ ಮಾತನಾಡಿ, ಮೆಡಿಕಲ್​ ತ್ಯಾಜ್ಯವನ್ನು ಹಾಕುತ್ತಿರುವುದನ್ನು ಕೆರೆಯ ಬಳಿ ವಾಕಿಂಗ್​ ಮಾಡುವವರು ಗಮನಿಸಿ ಗಮನಕ್ಕೆ ತಂದರು. ಸ್ಥಳಕ್ಕೆ ಹೋಗಿ ನೋಡಿದಾಗ ಕೆರೆಯಂಗಳದಲ್ಲಿ 20 ಚೀಲ ಮೆಡಿಕಲ್​ ತ್ಯಾಜ್ಯ ಇರುವುದು ಕಂಡುಬಂತು. ಇದು ದೊಡ್ಡ ಆಸ್ಪತ್ರೆಯವರ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಾಣಿಸಿದೆ. ಸದ್ಯ ಕರೊನಾ ಆತಂಕ ಮಧ್ಯೆ ಆಸ್ಪತ್ರೆಯವರು ಹೀಗೆ ಬೇಕಾಬಿಟ್ಟ ಮೆಡಿಕಲ್​ ತ್ಯಾಜ್ಯ ಎಸೆದಿರುವುದು ದುರಂತ.

ಕೆರೆಯಂಗಳದಲ್ಲಿ ಜಾನುವಾರುಗಳು ಮೇಯುತ್ತವೆ. ಈ ವೇಳೆ ಅವುಗಳಿಗೆ ಸೂಜಿ ಚುಚ್ಚುವ ಅಪಾಯವಿದೆ. ರೋಗ ಹರಡುವು ಸಾಧ್ಯತೆ ಜತೆಗೆ ಈಜಾಡುವ ಸಮಯದಲ್ಲಿ ಮಕ್ಕಳಿಗೆ ಚುಚ್ಚುವ ಅಪಾಯವಿದೆ. ಕೆರೆಯ ನೀರಿಗೆ ಅಪಾಯಕಾರಿ ವಸ್ತುಗಳು ಸೇರುವುದುರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳು ಮತ್ತು ಮನುಷ್ಯರಿಗೆ ಅಪಾಯ ಎದುರಾಗಲಿದೆ. ಸೂಕ್ತ ರೀತಿಯಲ್ಲಿ ಇಲ್ಲಿಂದ ವಿಲೇವಾರಿ ಮಾಡಬೇಕು. ಡಂಪ್ಪಿಂಗ್​ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಾರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net