ರಕ್ತದೊತ್ತಡ ಕುಸಿತಕ್ಕೊಳಗಾಗಿ ವೈದ್ಯಕೀಯ ವಿದ್ಯಾರ್ಥಿನಿ ದಿಢೀರ್​ ಸಾವು

Prateeksha
Published on

ಸುಬ್ರಹ್ಮಣ್ಯ: ಆರೋಗ್ಯದಲ್ಲಿ ದಿಢೀರ್ ಏರುಪೇರುಗೊಂಡ ಸುಬ್ರಹ್ಮಣ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಮೃತರಾದರು.

ಭಾನುವಾರ ರಾತ್ರಿ ರಕ್ತದೊತ್ತಡ ಕುಸಿತಕ್ಕೊಳಗಾಗಿ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಕಡಬ ತಾಲೂಕಿನ ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ಮನೆತನದ ಬೆಂಗಳೂರಿನ ಉದ್ಯಮಿ ದಿನೇಶ್ ಕೆ. ಅವರ ಪುತ್ರಿ ಪ್ರತೀಕ್ಷಾ(21) ಬೆಂಗಳೂರಿನಲ್ಲಿ ನಿಧನರಾದರು.

ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಪ್ರತೀಕ್ಷಾ ಬೆಂಗಳೂರಿನ ಮನೆಗೆ ಹೋಗಿದ್ದರು. ಅಸೌಖ್ಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಅವರು ತಂದೆ, ತಾಯಿ, ಸಹೋದರಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net