ಆರೋಗ್ಯ ಕೇಂದ್ರದಿಂದ ದೂರವಾಗಲಿದೆ ಜನೌಷಧಿ

DABASPETE JANOUSHADHI KENDRA-30-1
Published on

 ಚಿಕ್ಕರಾಜು ದಾಬಸ್ ಪೇಟೆ

ಬಡ ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಆರಂಭವಾಗಿದ್ದ ಜನೌಷಧಿ ಕೇಂದ್ರವಿನ್ನು ಬಡಜನರ ಪಾಲಿಗೆ ದೂರವಾಗುವ ಕಾಲ ಸನ್ನಿಹಿತವಾಗಿದೆ.

ದಾಬಸ್‌ಪೇಟೆ ಆರೋಗ್ಯ ಕೇಂದ್ರ ಆವರಣದಲ್ಲಿ ಕಳೆದ 3 ವರ್ಷದಿಂದ ನಡೆಯುತ್ತಿದ್ದ ಜನೌಷಧಿ ಕೇಂದ್ರವನ್ನು ತಿಂಗಳೊಳಗಾಗಿ ತೆರವುಗೊಳಿಸುವಂತೆ ಜಿಲ್ಲಾಡಳಿತ ಆದೇಶ ನೀಡಿರುವುದು ಗ್ರಾಮೀಣ ಭಾಗದ ಬಡ ಮಧ್ಯಮವರ್ಗದ ಜನರಿಗೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಬಡ ಮಧ್ಯಮ ವರ್ಗದ ಜನರ ಆರೋಗ್ಯ ಕಾಳಜಿಯಿಂದ ಅತೀ ಕಡಿಮೆ ದರದಲ್ಲಿ ಔಷಧಿಗಳನ್ನು ಪೂರೈಸಲು ಈ ಯೋಜನೆ ಜಾರಿಗೊಳಿಸಿದೆ. ಆದರೆ ರಾಜ್ಯ ಸರ್ಕಾರ ಆರೋಗ್ಯ ಕೇಂದ್ರಗಳ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ಸೂಚನೆ ನೀಡಿದೆ ಎನ್ನಲಾಗಿದ್ದು. ಅತೀ ಕಡಿಮೆ ದರದಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದ ಬಡ ಜನತೆ ತೀವ್ರ ನಿರಾಶೆಯಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ ಆದೇಶ: ಜನೌಷಧಿ ಕೇಂದ್ರಗಳನ್ನು ಕೇಂದ್ರಗಳನ್ನು ಆಸ್ಪತ್ರೆ ಆವರಣದಿಂದ ತೆರವುಗೊಳಿಸಲು ಜಿಲ್ಲಾ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ ಎನ್ನಲಾಗಿದ್ದು, ಜನಪರವಾಗಿರಬೇಕಾದ ಆಡಳಿತ ಯಂತ್ರಗಳೆ ಜನ ವಿರೋಧಿ ಕೆಲಸಕ್ಕೆ ಮುಂದಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಬಸ್‌ಪೇಟೆ ಹೋಬಳಿ ವ್ಯಾಪ್ತಿಯ ಸಾಕಷ್ಟು ಗ್ರಾಮಗಳ ಬಡಜನರಿಗೆ ಈ ಜನೌಷಧಿ ಕೇಂದ್ರ ವರದಾನವಾಗಿತ್ತು ಈಗ ಏಕಾಏಕಿ ತೆರವುಗೊಳಿಸುವ ಆದೇಸ ನೀಡಿರುವುದು ಔಷಧಿಗಳಿಗಾಗಿ ಪರದಾಡುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ.

ಆರೋಗ್ಯ ಕೇಂದ್ರದಲ್ಲಿ ಸಿಗುವುದಿಲ್ಲ: ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಅಗತ್ಯವಿರುವ ಯಾವುದೇ ಔಷಧಿಗಳು ಸಿಗುವುದಿಲ್ಲ, ಎಲ್ಲವನ್ನೂ ಖಾಸಗಿಯಾಗಿ ಹೊರಗಡೆಗೆ ಬರೆದು ಕೊಡುತ್ತಾರೆ. ಇವರು ಬರೆದುಕೊಟ್ಟ ಔಷಧಿಗಳನ್ನು ಖರೀದಿಸಿಲು ಇಡೀ ಹೋಬಳಿ ಸುತ್ತಾಡಿದರೂ ಸಿಗುವುದು ಕಷ್ಟ. ಜತೆಗೆ ದುಬಾರಿ ಬೆಲೆ ತೆರಬೇಕು ಇಂಥ ಪರಿಸ್ಥಿತಿ ನಿರ್ಮಾಣ ಮಾಡುವುದರಿಂದ ಯಾರಿಗೆ ಉಪಯೋಗವೋ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ಇದು ಸರ್ಕಾರದ ಆದೇಶ: ಇದು ಕೇವಲ ದಾಬಸ್‌ಪೇಟೆ ಅರೋಗ್ಯ ಕೇಂದ್ರಕ್ಕೆ ಸೀಮಿತವಾಗಿಲ್ಲ, ರಾಜ್ಯದ ಎಲ್ಲ ಕಡೆಯಲ್ಲಿ ಆರೋಗ್ಯ ಕೇಂದ್ರದ ಆವರಣದಲ್ಲಿನ ಮಳಿಗೆಗಳನ್ನು ತೆರವುಮಾಡುವಂತೆ ಅದೇಶ ಮಾಡಲಾಗಿದೆ. ಸರ್ಕಾರದ ಆದೇಶ ಪಾಲನೆ ಮಾಡಲಾಗುತ್ತಿದೆ ಇದರಲ್ಲಿ ಯಾವುದೇ ವಯಕ್ತಿಯ ಹಿತಾಸಕ್ತಿ ಇಲ್ಲ ಎಂಬುದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಸ್ವಷ್ಟಣೆಯಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯ ರಕ್ಷಕ ಔಷಧಿಗಳನ್ನು ಈ ಕೇಂದ್ರದಲ್ಲಿ ಕಳೆದ ಮೂರು ವರ್ಷದಿಂದ ವಾರಾಟ ವಾಡುತ್ತಿದ್ದರು. ಈ ಮಳಿಗೆಯನ್ನು ತಿಂಗಳ ಗಡುವು ನೀಡಿ ಬೇರೆಡೆಗೆ ಸ್ಥಳಾಂತರ ವಾಡಲು ಆದೇಶ ನೀಡಿರುವುದು ಬೇಸರದ ಸಂಗತಿಯಾಗಿದೆ. ಖಾಸಗಿ ಡ್ರಗ್ ವಾಫಿಯಾದವರ ಜತೆ ಸೇರಿ ಇಂಥ ಹೇಯ ಕತ್ಯ ವಾಡುತ್ತಿರುವುದು ಸರಿಯಲ್ಲ.

ರವಿಕುಮಾರ್, ಸಾಮಾಜಿಕ ಹೋರಾಟಗಾರ ದಾಬಸ್‌ಪೇಟೆ

--------

ಜನೌಷಧಿ ಕೇಂದ್ರ ಬೇರೆಡೆಗೆ ಸ್ಥಳಾಂತರ ವಾಡವುದರಿಂದ ಸರ್ಕಾರಕ್ಕಾಗಲಿ ಆರೋಗ್ಯ ಇಲಾಖೆಗಾಗಲಿ ಏನು ಪ್ರಯೋಜನ ಎನ್ನುವುದು ತಿಳಿಯುತ್ತಿಲ್ಲ. ನೀವು ವಾಡಿರುವ ಆದೇಶ ಜನಪರವಾಗಿರಬೇಕೋ ಇಲ್ಲ ಜನ ವಿರೋಧಿಯಾಗಿರಬೇಕೋ ತಿಳಿಸಬೇಕು. ಈ ಆದೇಶದ ವಿರುದ್ಧ ಜನ ಸಂಟನೆ ವಾಡಿ ಹೋರಾಟ ಮಾಡಲಾಗುವುದು.

ಬಿ.ಪಿ.ಶ್ರೀನಿವಾಸ್, ಸ್ಥಳೀಯ ಮುಖಂಡ ದಾಬಸ್‌ಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net