

ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಇನ್‌ಸ್ಟ್ಟಿಟ್ಯೂಟ್ ನರ್ಸಿಂಗ್ ಸೈನ್ಸ್‌ನಲ್ಲಿ ಅಂತಾರಾಷ್ಟ್ರೀಯ ವೆಬಿನಾರ್ ನಡೆಯಿತು.
ದೇಶದ ಕೆಎಲ್‌ಇ ಸಂಸ್ಥೆಯ ವಿವಿಧ ಮಹಾವಿದ್ಯಾಲಯಗಳು ಸೇರಿ ದುಬೈ, ಕುವೈತ್, ಯುಎಸ್‌ಎ, ಯುಕೆ,. ಆಸ್ಟ್ರೇಲಿಯಾ, ಇಥಿಯೋಪಿಯ ಮತ್ತು ಸೌದಿ ಅರೇಬಿಯಾದ ವಿವಿಧ ಮಹಾವಿದ್ಯಾಲಯಗಳ ವ್ಯೆದ್ಯಕೀಯ, ನರ್ಸಿಂಗ್, ದಂತ ವಿಜ್ಞಾನ ಅಭಿಯಾಂತ್ರಿಕ ಕ್ಷೇತ್ರಗಳ 1,150 ಪ್ರತಿನಿಧಿಗಳು ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು. ನರ್ಸಿಂಗ್ ಕಾಲೇಜ್‌ನ ಮಾನಸಿಕ ಆರೋಗ್ಯ ವಿಭಾಗ ಮತ್ತು ಯು.ಎಸ್.ಫಿಲಿಡೆಲ್ಫಿಯಾ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ವೆಬಿನಾರ್ ಆಯೋಜಿಸಲಾಗಿತ್ತು. ‘ಮಾನಸಿಕ ಪ್ರಥಮ ಚಿಕಿತ್ಸೆ, ವಿವಿಧ ಆಯಾಮಗಳು’ ವಿಷಯವಾಗಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿದರು.
ಕೊವಿಡ್-19 ಇಡೀ ಮನುಕುಲಕ್ಕೆ ಸಂಕಷ್ಟ ತಂದೊಡ್ಡಿದೆ. ಇದರಿಂದ ಜಾಗತಿಕವಾಗಿ ಹತ್ತು ಹಲವಾರು ವೈದ್ಯಕೀಯ ಸವಾಲುಗಳು ಎದುರಾಗಿವೆ. ಈ ಸವಾಲುಗಳನ್ನು ವೈದ್ಯರು ಸ್ವೀಕರಿಸುತ್ತಿದ್ದಾರೆ. ಅದರಲ್ಲೂ ಕೆಎಲ್‌ಇ ಸಂಸ್ಥೆ ಆಸ್ಪತ್ರೆಗಳ ವೈದ್ಯರು ಕ್ಲಿಷ್ಟಕರ ಸನ್ನಿವೇಶವನ್ನು ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಲ್‌ಇ ಸ್ವಾಯತ್ತ ವಿವಿ ಉಪಕುಲಪತಿ ಡಾ.ವಿವೇಕ ಸಾವೋಜಿ ಮಾತನಾಡಿದರು. ವಿಜ್ಞಾನ ಮಹಾ ವಿದ್ಯಾಲಯದ ಪ್ರಾಚಾರ್ಯೆ ಡಾ. ಸುಧಾರಡ್ಡಿ ಸ್ವಾಗತಿಸಿದರು. ಎರಡು ದಿನಗಳ ಅಂತಾ ರಾಷ್ಟ್ರೀಯ ವೆಬಿನಾರ್‌ನಲ್ಲಿ ಫಿಲಿಡೆಲ್ಫಿಯಾ ಥಾಮಸ್ ಜೆಫರ್ಸನ್ ವಿವಿ ಸಹಾಯಕ ಪ್ರಾಧ್ಯಾಪಕಿ ಮತ್ತು ಕೆಎಲ್‌ಇ ಸ್ವಾಯತ್ತ ವಿವಿ ಅತಿಥಿ ಪ್ರಾಧ್ಯಾಪಕಿ ಡಾ.ಮಿಸ್ಞಾಜ್ನಾ, ಡಾ. ಬಾಬಿ ಪೊಸ್ಮೊಟಿಯರ್, ಎಂಜಲಾ ಎಮ್ಸೇ, ಅಪರ್ಣಕುಮಾರ, ಆಸ್ಟ್ರೇಲಿಯಾದಿಂದ ಮಿನಿಜಾರ್ಜೆ, ಬೆಳಗಾವಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಡಾ. ಮಾಧವಪ್ರಭು ಮತ್ತಿತರರು ವಿವಿಧ ವಿಷಯಗಳ ಕುರಿತು ವೆಬಿನಾರನಲ್ಲಿ ಚರ್ಚಿಸಿದರು.
ವೆಬಿನಾರ್ ಸಂಘಟನಾ ಕಾರ್ಯದರ್ಶಿ ಪ್ರೊ. ವೀರೇಶಕುಮಾರ ನಂದಗಾಂವ, ಜಂಟಿ ಕಾರ್ಯದರ್ಶಿ ಅಶೋಕ ಕಾಮತ, ಗುರುರಾಜ ಉಡುಪಿ, ಸುಷ್ಮಾ ಪಾಟೀಲ, ಸಂಗನಗೌಡ ಶಾನಭಾಗ ಮತ್ತು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೆಬಿನಾರ್ ಯಶಸ್ವಿಗೆ ಶ್ರಮಿಸಿದರು.