ಕ್ಯಾನ್ಸರ್ ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

22adarshkdga5
Published on

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ರೋಗ ಲಕ್ಷಣ ಶಾಸ್ತ್ರ ವಿಭಾಗದ ವತಿಯಿಂದ ಗರ್ಭಚೀಲ ಮತ್ತು ಗರ್ಭಕೋಶದ ಕ್ಯಾನ್ಸರ್ ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿತ್ತು.


ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿಗಳಾದ ಎ.ಎಲ್.ಸ್ವಾಮಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇತರೆ ಜಿಲ್ಲೆಯ ಹೆಸರಾಂತ ರೋಗ ಲಕ್ಷಣ ಶಾಸ್ತ್ರ ಮುಖ್ಯಸ್ಥರುಗಳಾದ ಡಾ.ಅನುರಾಧ ಸಿ.ಕೆ.ರಾವ್, ಡಾ.ಅನಿತಾ ಪಿ.ಜವಲಗಿ, ಡಾ.ಗೀತಾ ದೊಪ್ಪ, ಡಾ ಶೀಲಾದೇವಿ ಡಾ.ಸುಚಿತ್ರಾ ಎಸ್, ಸಂಸ್ಥೆಯ ವಿಭಾಗದ ಮುಖ್ಯಸ್ಥರುಗಳಾದ ಡಾ.ರಾಮಚಂದ್ರ ಕಾಮತ್ ಮತ್ತು ಡಾ.ಪದ್ಮಜ ಕುಲಕರ್ಣಿ ಪ್ಯಾಪ್ ಸ್ಮೈರ್, ಕ್ಯಾನ್ಸರ್ ಪತ್ತೆ ಹಚ್ಚುವ ಮತ್ತು ತಡೆಗಟ್ಟುವ ಬಗ್ಗೆ ಹಾಗೂ ಇತ್ತೀಚಿನ ಅತ್ಯಾದುನಿಕಾ ಚಿಕಿತ್ಸಾ ಕ್ರಮಗಳ ಬಗ್ಗೆ ವಿಮರ್ಶೆ ಹಾಗೂ ಅಧ್ಯಾಯನಗಳ ಬಗ್ಗೆ ಚರ್ಚೆ ನಡೆಸಿದರು.


ಕಾರ್ಯಕ್ರಮ ಅನ್ಲೈನ್ ಮತ್ತು ಅಫ್ ಲೈನ್ ಮುಖಾಂತರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ಹಲವೆಡೆಗಳಿಂದ ೨೦೦ ಕ್ಕೂ ಹೆಚ್ಚು ವೈದ್ಯರುಗಳು ನೊಂದಣಿಯನ್ನು ಮಾಡಿದ್ದರು. ಕಾರ್ಯಕ್ರಮದಲ್ಲಿ ನೋಂದಾಯಿತ ವೈದ್ಯರುಗಳು ಕೊಡಗು ವೈದ್ಯಕೀಯ ವಿಜ್ನಾನಗಳ ಸಂಸ್ಥೆಯ ಪ್ರಾಧ್ಯಾಪಕರುಗಳು ಹಾಗೂ ಇತರೆ ವೈದ್ಯಕೀಯ ಕಾಲೇಜಿನ ವೈದ್ಯರುಗಳು ವಿದ್ಯಾರ್ಥಿಗಳು ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net