ಈ ವರ್ಷ ವೈದ್ಯಕಿಯ ಕೋರ್ಸ್​ಗೆ ಎಷ್ಟಿದೆ ಶುಲ್ಕ?

docter
Published on

ಬೆಂಗಳೂರು: ಕರ್ನಾಟಕ ಪರೀಕ್ಷಾ  ಪ್ರಾಧಿಕಾರ(ಕೆಇಎ) ನೀಟ್​&2020 ವೈದ್ಯಕಿಯ ಮತ್ತು ದಂತವೈದ್ಯಕಿಯ ಕೋರ್ಸ್​ಗಳ ಪ್ರವೇಶಕ್ಕೆ ಶುಲ್ಕದ ಮಾಹಿತಿಯನ್ನು ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು ವೆಬ್​ಸೈಟ್​ಗೆ ಭೇಟಿ ನೀಡಿ ಕೋರ್ಸ್​ ಮತ್ತು ಕಾಲೇಜು ಆಯ್ಕೆ ಮಾಡಿದಲ್ಲಿ ಕಾಲೇಜಿನ ಬೋಧನಾ ಶುಲ್ಕ, ಹಾಸ್ಟೆಲ್​, ಊಟ, ಸಾರಿಗೆ ವ್ಯವಸ್ಥೆ ಎಲ್ಲ ಶುಲ್ಕದ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಈಗಾಗಲೇ ಕೆಇಎ ನ.25ರಂದೇ ಸೀಟು ಹಂಚಿಕೆ ಮಾಡಿ ಲಿತಾಂಶ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಸೀಟು ಖಚಿತ ಪಡಿಸಿಕೊಂಡು ಕಾಲೇಜುಗಳಿಗೆ ದಾಖಲಾಗಬೇಕಿದೆ. ಈ ವೇಳೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಶುಲ್ಕದ ಮಾಹಿತಿ ಬಿಡುಗಡೆ ಮಾಡಿದೆ.
ಯುಜಿ ಸಿಇಟಿ: ಯುಜಿ ಸಿಇಟಿ ಅಣಕು ಸೀಟು ಹಂಚಿಕೆಯ ಲಿತಾಂಶವನ್ನು ಬಿಡುಗಡೆ ಮಾಡಿದ್ದು, ಆಪ್ಷನ್​ ಎಂಟ್ರಿ ತಿದ್ದುಪಡಿಗಾಗಿ ಡಿ.1 ಬೆಳಗ್ಗೆ 11 ಗಂಟೆಯವರೆಗೂ ಸಮಯ ನೀಡಿದೆ. ವಿದ್ಯಾರ್ಥಿಗಳು ಹಾಲಿ ಸಲ್ಲಿಸಿರುವ ಆಪ್ಷನ್​ ಅನ್ನು ಬದಲು ಮಾಡಿಕೊಳ್ಳಬಹುದು. ಹೊಸದಾಗಿಯೂ ಸಲ್ಲಿಸಬಹುದು. ಇದರ ಆಧಾರದ ಮೇಲೆ ಡಿ.2ರಂದು ಸಂಜೆ 6ಗಂಟೆಗೆ ನೈಜ ಸೀಟು ಹಂಚಿಕೆಯ ಲಿತಾಂಶವನ್ನು ಬಿಡುಗಡೆ ಮಾಡಲಿದೆ. ಇದಾದ ಮೇಲೆ ದಾಖಲಾತಿ ವೇಳಾಪಟ್ಟಿಯನ್ನು ಶ್ರೀದಲ್ಲೇ ಬಿಡುಗಡೆ ಮಾಡುವುದಾಗಿ ಕೆಇಎ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net