ಅನಾರೋಗ್ಯಕ್ಕೊಳಗಾದ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯ

Medical college meeting
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಕೂಗು ಹೆಚ್ಚಿದೆ. ಅದನ್ನು ನೀಗಿಸಲು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ಬೋಧಕ ಆಸ್ಪತ್ರೆಯಲ್ಲಿಯೇ ಸೂಪರ್ ಸ್ಪೆಷಾಲಿಟಿ ಸೌಲಭ್ಯ ನೀಡಲು ಸರ್ಕಾರ ಯೋಜಿಸಿದೆ. ವೈದ್ಯರು ಸಮನ್ವಯದಿಂದ, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಜನರ ವಿಶ್ವಾಸ ಗಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಸರ್ಕಾರಿ ಮೆಡಿಕಲ್ ಕಾಲೇಜ್‌ನಲ್ಲಿ ವೈದ್ಯರು, ವಿದ್ಯಾರ್ಥಿಗಳ ಸಭೆ ನಡೆಸಿ ಅವರು ಮಾತನಾಡಿದರು. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಮೆಡಿಕಲ್ ಕಾಲೇಜ್‌ನ್ನು ಕಾರವಾರಕ್ಕೆ ಮಂಜೂರು ಮಾಡಲಾಗಿತ್ತು. ಈಗ ತುರ್ತು ಅಗತ್ಯವಿರುವ ಎಂಆರ್‌ಐ ಯಂತ್ರವನ್ನು ಒದಗಿಸಲು ಕ್ಯಾಬಿನೆಟ್ ಅನುಮೋದನೆ ದೊರಕಿದೆ. ಒಂದೆರಡು ತಿಂಗಳಲ್ಲಿ, 450 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಸಿದ್ಧವಾಗಲಿದೆ. ಟ್ರಾಮಾ ಕೇರ್ ಸೆಂಟರ್ ಕಟ್ಟಡ ಕೂಡ ಪ್ರತ್ಯೇಕವಾಗಿ ನಿರ್ಮಾಣವಾಗುತ್ತಿದೆ. ಇನ್ನು ಬೇಕಾದ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಆದರೆ, ಇಲ್ಲಿನ ಕೆಲ ಸಮಸ್ಯೆಗಳಿಂದ ಜನ ಆಸ್ಪತ್ರೆಗೆ ಬರಲು ಹೆದರುತ್ತಾರೆ. ಹೆಚ್ಚಿನ ವಿದ್ಯರ‍್ಥಿಗಳನ್ನು ಮಂಗಳೂರು ಅಥವಾ ಬೇರೆ ಆಸ್ಪತ್ರೆಗಳಿಗೆ ಕಳಿಸಲಾಗುತ್ತಿದೆ ಎಂದರು.
ಆಶಾ ಕಿರಣ ಯೋಜನೆಯಲ್ಲಿ ಸರ್ಕಾತ 29 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಉತ್ತರ ಕನ್ನಡ ಸೇರಿ ನಾಲ್ಕು ಜಿಲ್ಲೆಗಳ ಎಲ್ಲರ ಕಣ್ಣಿನ ತಪಾಸಣೆ ನಡೆಸಿ, ಕನ್ನಡಕ ನೀಡುವ ಯೋಜನೆ ಇದಾಗಿದೆ. ಕ್ರಿಮ್ಸ್ ವೈದ್ಯರು ಅದಕ್ಕೆ ಸಹಕಾರ ನೀಡಬೇಕು ಎಂದರು.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ
ಕಾಲೇಜ್‌ನ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಅಽಕೃತ ಪತ್ರ ನೀಡದ ಬಗ್ಗೆ ಕೆಲ ವೈದ್ಯರು ದೂರಿದರು. ನಿಯಮ ಮೀರಿ ನೇಮಕಾತಿ, ಹಿರಿತನ ಕಡೆಗಣಿಸಿದ ಬಗ್ಗೆ ವೈದ್ಯರು ದೂರು ಹೇಳಿಕೊಂಡರು. ವೈದ್ಯರ ವಿವಿಧ ಸಮಸ್ಯೆಗಳನ್ನು ಆಲಿಸಿದ ಸಚಿವ ಮಂಕಾಳ ವೈದ್ಯ, ಇನ್ನೊಂದು ತಿಂಗಳಲ್ಲಿ ಮತ್ತೊಮ್ಮೆ ಸಭೆ ನಡೆಸುತ್ತೇನೆ. ತಕ್ಷಣ ಇಲ್ಲಿ ಅಗತ್ಯವಿರುವ ಸಾಮಗ್ರಿಗಳು, ಬೇಕಾದ ಬೇಡಿಕೆಗಳ ಪಟ್ಟಿ ಒದಿಸಬೇಕು. ಸಮಸ್ಯೆಗಳನ್ನು ಬಗೆಹರಿಸಬೇಕು. ಅಽಕಾರಿಗಳು, ವೈದ್ಯರು ರಾಜಕೀಯ ಮಾಡಬಾರದು ಎಚ್ಚರಿಕೆ ನೀಡಿದರು. ಶಾಸಕ ಸತೀಶ ಸೈಲ್, ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್,ನರ‍್ದೇಶಕ ಡಾ.ಗಜಾನನ ನಾಯಕ, ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್, ಆಡಳಿತಾಽಕಾರಿ ಟಿ.ಸಿ.ಹಾದಿಮನಿ ವೇದಿಕೆಯಲ್ಲಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net