

ಗುರುಪುರ: ಎಡಪದವಿನಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಸ್ಥಾಪಿಸುವ ಕುರಿತು ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 169ರ ಎಡಪದವು ಜಂಕ್ಷನ್‌ನಿಂದ ಕುಪ್ಪೆಪದವು-ಮುತ್ತೂರು ಮೂಲಕ ಬಂಟ್ವಾಳ ತಾಲೂಕು ಸಂಪರ್ಕಿಸುವ ಸುಮಾರು 9.62 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶನಿವಾರ ಎಡಪದವಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಇದೇ ವೇಳೆ ಎಡಪದವಿನಲ್ಲಿ ಎರಡು ಆಟೋರಿಕ್ಷಾ ತಂಗುದಾಣಗಳಿಗೆ ಮೇಲ್ಛಾವಣಿ, ಇಂಟರ್‌ಲಾಕ್ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.