

ಮಡಿಕೇರಿ:
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಪ್ರತಿಮ 2019ನೇ ಬ್ಯಾಚಿನ ಅವಿರತ 2025 ಘಟಿಕೋತ್ಸವ ಸಮಾರಂಭ ಬುಧವಾರ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್, ಈ ಕ್ಷಣವು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೆ ಅತೀವ ಸಂತೋಷ ತಂದಿರುವ ದಿನವಾಗಿದೆ. ಈ ದಿನದವರೆಗೂ ವಿದ್ಯಾರ್ಥಿಗಳಾಗಿದ್ದವರು ಇಂದಿನಿAದ ವೃತ್ತಿಪರ ವೈದ್ಯರಾಗುತ್ತಾರೆ. ಪದವಿ ಪ್ರಮಾಣ ಪತ್ರ ಪಡೆಯುವುದರ ಜತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ತಬುದ್ದರಾಗುವುದು ಅತಿಮುಖ್ಯ. ಪ್ರತಿ ವರ್ಷ 1,15,000 ಕ್ಕೂ ಹೆಚ್ಚು ವೈದ್ಯರು ಪದವಿ ಪಡೆದರು ಕೂಡ ಪ್ರಸಿದ್ಧ ವೈದ್ಯರಾಗುವುದು ಕೆಲವರಿಂದ ಮಾತ್ರ ಸಾಧ್ಯ. ವೈದ್ಯ ವೃತ್ತಿ ಎಂಬುದು ಕೇವಲ ಪದವಿ ಅಲ್ಲ. ಬದ್ಧತೆ, ಔದರ್ಯ ಹಾಗೂ ನಿಷ್ಠೆ ಹೊಂದಿರುವ ಕ್ಷೇತ್ರ.
ವೈದ್ಯರ ಕೈಯಲ್ಲಿ ಭವಿಷ್ಯದ ವೈದ್ಯಕೀಯ ಕ್ಷೇತ್ರವಿದೆ. ಒಂದು ಮೃದುವಾದ ಮಾತು, ಕಾಳಜಿಯ ಸ್ಪರ್ಶ, ಶ್ರವಣ ಶಕ್ತಿ ಈ ಎಲ್ಲಾವೂ ಚಿಕಿತ್ಸೆಯಷ್ಟೆ ಪ್ರಾಮುಖ್ಯತೆ ಹೊಂದಿದೆ. ಸಮಾಜವು ಕೊಡುವವರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ತೆಗೆದುಕೊಳ್ಳುವವರನಲ್ಲ. ಜ್ಞಾನ ಪಡೆಯುವುದು, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ವೈದ್ಯರು ರೋಗಿಗಳ ಮತ್ತು ದೇವರ ನಡುವಿನ ಕೊಂಡಿಯಾಗಿರುತ್ತಾರೆ. ವೈದ್ಯರ ಕೆಲಸ ದೇವರ ಕೆಲಸ ಎಂದರು.
ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾದ ಡಾ.ಸಂಜಯ್ ಜೋಡ್‌ಪೇ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ವಿತರಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕÀ ಡಾ. ಎ.ಜೆ. ಲೋಕೇಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಕೆ.ಎಂ. ರೋಹಿಣಿ, ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷ ಡಾ. ಸೋಮಶೇಖರ್, ಜಿಲ್ಲಾ ಸರ್ಜನ್ ಡಾ. ನಂಜುAಡಯ್ಯ, ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರು ಇತರರು ಇದ್ದರು.