ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಂಗವಿಕಲರಿಗೆ ಆಲಿಂಕೋ ಸಂಸ್ಥೆ ವತಿಯಿಂದ ಜು.6 ರಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ವೈದ್ಯಕೀಯ (ಅಸೆಸ್‌ಮೆಂಟ್ ಕ್ಯಾಂಪ್) ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ.
ಪಟ್ಟಣದ ಸಿ.ಎಂ.ರಸ್ತೆಯ ಶ್ರೀಕೃಷ್ಣ ಮಂದಿರದಲ್ಲಿ ಅಂಗವಿಕಲರಿಗೆ ಸಾಧನ ಸಲಕರಣೆ ಪಡೆಯಲು ವೈದ್ಯಕೀಯ (ಅಸೆಸ್‌ಮೆಂಟ್ ಕ್ಯಾಂಪ್) ತಪಾಸಣೆಯನ್ನು ನಡೆಸಲಾಗುವುದು. ಆದ್ದರಿಂದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಅಂಗವಿಕಲರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜಕ ಕಾಟ್ನಾಳು ಎಲ್.ಹೇಮಂತಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್: 94802 53203 ಸಂಪರ್ಕಿಸಬಹುದು.