

ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ, ಸಾಮೂಹಿಕ ಆರೋಗ್ಯ ಕೇಂದ್ರ, ಜನಕೀಯ ಆರೋಗ್ಯ ಸಮಿತಿ, ಪೆರಡಾಲ ನವಜೀವನ ಶಾಲೆಯ ಎನ್ನೆಸ್ಸೆಸ್ ಘಟಕದ ವತಿಯಿಂದ ಹಿರಿಯ ನಾಗರಿಕರ ಸಂಗಮ ಹಾಗೂ ವೈದ್ಯಕೀಯ ಶಿಬಿರ ಭಾನುವಾರ ಪೆರಡಾಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶಾಂತಾ ಬಿ.ಉದ್ಘಾಟಿಸಿದರು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ಶಂಕರ ಪಾಟಾಳಿ, ಕೇರಳ ಸೀನಿಯರ್ ಸಿಟಿಜನ್ ಫೋರಂ ಬದಿಯಡ್ಕ ಘಟಕದ ಪೆರ್ಮುಖ ಈಶ್ವರ ಭಟ್, ಜೆ.ಪಿ.ಎಚ್.ಎನ್ ಕೃಷ್ಣಪ್ರಿಯಾ, ರಾಜೀವ್ ಪಿ.ವಿ. ಟಿ., ವೈದ್ಯಾಧಿಕಾರಿ ಮೇಘನಾ, ಮೊಯ್ದೀನ್ ಕುಟ್ಟಿ, ಸ್ನೇಹಾನಿ ಕ್ಲಬ್‌ನ ಪ್ರವೀಣ್ ಶುಭಾಶಂಸನೆಗೈದರು. 8ನೇ ವಾರ್ಡ್ ಸದಸ್ಯೆ ಶುಭಲತಾ ರೈ ಸ್ವಾಗತಿಸಿದರು.
ಬಳಿಕ ಹಿರಿಯ ಫಿಸಿಯೋಥೆರಪಿಸ್ಟ್ ಗಿರೀಶ್ ಅವರು ವ್ಯಾಯಾಮದ ಮೂಲಕ ಜೀವನಶೈಲಿ ರೋಗ ನಿರ್ವಹಣೆ ಕುರಿತು ತರಗತಿ ನಡೆಸಿಕೊಟ್ಟರು. ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಮತ್ತು ಎಸ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಪಿಟೀಲು ವಾದಕ ಕೆ.ವಿ.ಸುಧೀಶ್ ಅವರ ನೇತೃತ್ವದಲ್ಲಿ ’ಸ್ಟ್ರಿಂಗ್ ಜೋನ್’ ಗಮನ ಸೆಳೆಯಿತು. ಆಶಾ ಕಾರ್ಯಕರ್ತೆಯರು ಹಾಗೂ 8, 9 ಮತ್ತು 10ನೇ ವಾರ್ಡ್‌ನ ಹಸಿರು ಕ್ರಿಯಾಸೇನೆ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಸ್ನೇಹನಿ ಕ್ಲಬ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು, ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್ ವಂದಿಸಿದರು.