

ಪುತ್ತೂರು ಗ್ರಾಮಾಂತರ: ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ಕುಂಬ್ರ ವರ್ತಕರ ಸಂಘ ಆಶ್ರಯದಲ್ಲಿ ಸುಳ್ಯದ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಮಂಗಳೂರಿನ ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.
ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಉದ್ಘಾಟಿಸಿದರು. ಕುಂಬ್ರ ವರ್ತಕರ ಸಂ ಅಧ್ಯಕ್ಷ ಪಿ.ಕೆ.ಮಹಮ್ಮದ್ ಕೂಡುರಸ್ತೆ ಅಧ್ಯಕ್ಷತೆ ವಹಿಸಿದ್ದರು. ಕುಂಬ್ರ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಉದ್ಯಮಿ ಮೋಹನದಾಸ ರೈ ಕುಂಬ್ರ, ಪುತ್ತೂರು ಸರ್ಕಾರಿ ಆಸ್ಪತ್ರೆ ಆಪ್ತ ಸಮಾಲೋಚಕ ತಾರಾನಾಥ ರೈ, ಕೆವಿಜಿಯ ಡಾ.ಅನಿರುದ್ಧ್, ಡಾ.ವೇಣುಗೋಪಾಲ್, ವರ್ತಕರ ಸಂಘ ಗೌರವ ಸಲಹೆಗಾರರಾದ ದುರ್ಗಾಪ್ರಸಾದ್ ರೈ ಕುಂಬ್ರ, ಅಬ್ದುಲ್ ರಹಿಮಾನ್ ಅರಿಯಡ್ಕ ಮಾತನಾಡಿದರು. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಅಂತಿಮ ವರ್ಷದ ಎಂ.ಡಿ.ಆಯುರ್ವೇದ ಪರೀಕ್ಷೆಯಲ್ಲಿ ಅಂತಿಮ ಸ್ನಾತಕೋತ್ತರ ವಿಭಾಗದಲ್ಲಿ 3ನೇ ರ‌್ಯಾಂಕ್ ಪಡೆದ ಧನ್ಯಶ್ರೀ ಬೈಲಾಡಿ ಅವರನ್ನು ವರ್ತಕರ ಸಂಘದಿಂದ ಸನ್ಮಾನಿಸಲಾಯಿತು. ಸಂಘ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಉಪಾಧ್ಯಕ್ಷ ಸದಾಶಿವ ಕುಂಬ್ರ, ಪ್ರಮುಖರಾದ ನಾರಾಯಣ ಪೂಜಾರಿ ಕುರಿಕ್ಕಾರ, ಎಸ್.ಮಾಧವ ರೈ ಕುಂಬ್ರ, ಸಂಶುದ್ದೀನ್ ಎ.ಆರ್., ರಾಜೇಶ್ ರೈ ಪರ್ಪುಂಜ, ಶರತ್ ರೈ ದೇರ್ಲ, ದಿವಾಕರ ಶೆಟ್ಟಿ, ಉದಯ ಆಚಾರ್ಯ ಕಷ್ಣನಗರ ಮತ್ತಿತರರಿದ್ದರು. ಸುಂದರ ರೈ ಮಂದಾರ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ನಿರೂಪಿಸಿದರು. ಸಂಘ ಪ್ರಧಾನ ಕಾರ್ಯದರ್ಶಿ ಭವ್ಯಾ ರೈ ವಂದಿಸಿದರು.