

ಉಳ್ಳಾಲ: ನಾನು ಬದುಕಬೇಕು, ನಾವು ಬದುಕಬೇಕು, ಸಮಸ್ತ ಜನರು ಬದುಕಬೇಕು ಎನ್ನುವ ಜನರ ನಡುವೆ ವಾರುತಿ ಜನಸೇವಾ ಸಂ ಲೋಕದ ಸಮಸ್ತ ಜನರು ಬದುಕಬೇಕು ಎನ್ನುವ ಭಾವನೆ ಹೊಂದಿದ್ದು, ಇದು ದೇಶ ಪ್ರೇಮದ ಭಾಗ ಎಂದು ಮೊಗವೀರ ಸಂದ ಅಧ್ಯಕ್ಷ ಯಶವಂತ ಪಿ.ಅಮೀನ್ ಅಭಿಪ್ರಾಯಪಟ್ಟರು.
ಉಳ್ಳಾಲದ ಮೊಗವೀರಪಟ್ಣ ವಾರುತಿ ಜನಸೇವಾ ಸಂ, ವಾರುತಿ ಯುವಕ ಮಂಡಲದ ಆಶ್ರಯದಲ್ಲಿ ‘ವಾರುತಿ ಮಾಣಿಕ್ಯ40’ರ ಪ್ರಯುಕ್ತ ಭಾನುವಾರ ವಾರುತಿ ಸಭಾಂಗಣದಲ್ಲಿ ನಡೆದ ವೈದ್ಯಕೀಯ ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಪರಿಸರ ಪ್ರೇಮಿ ಮಾಧವ ಉಳ್ಳಾಲ್ ವಾತನಾಡಿ, ಒಂದು ಸಂಸ್ಥೆ ಯಾವ ರೀತಿ ಸಮ ಜಕ್ಕೆ ಸೇವೆ ನೀಡಬಹುದು ಎನ್ನುವುದನ್ನು ಮಾ ರುತಿ ಜನಸೇವಾ ಸಂಘ ತೋರಿಸುವ ಮೂಲಕ ಹಲವು ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದರು.
ಧ್ವಜಾರೋಹಣಗೈದ ಮೊಗವೀರ ಸಂಘ ವಾಜಿ ಅಧ್ಯಕ್ಷ ಸದಾನಂದ ಬಂಗೇರ ಮಾತನಾಡಿ, ಸಂಘ ಪದಾಧಿಕಾರಿಗಳು ತಮ್ಮ ದುಡಿಮೆಯ ಹಣದಲ್ಲಿ ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸುತ್ತಿದ್ದು, ಇಂಥ ಕಾರ್ಯಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಾರುತಿ ಜನಸೇವಾ ಸಂಘ ಮತ್ತು ವಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ವಿ.ಅಮೀನ್ ಮೊದಲಾದವರಿದ್ದರು.
ಸಂದ ಉಪಾಧ್ಯಕ್ಷ ಪ್ರಶಾಂತ್ ಪಿ. ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್.ಬಂಗೇರ ನಿರೂಪಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಹಣದ ಜತೆ ಮತ್ತಷ್ಟು ಹಣ ಸೇರಿಸಿ ನಾಲ್ಕು ಶವ ಶೀಥಲೀಕರಣ ಪೆಟ್ಟಿಗೆಗಳನ್ನು ಉಳ್ಳಾಲ ಆರೋಗ್ಯ ಕೇಂದ್ರಕ್ಕೆ ನೀಡಲಾಗಿದೆ. 40ನೇ ವರ್ಷದ ಕಾರ್ಯಕ್ರಮದ ಪ್ರಯುಕ್ತ ಬಡ 40 ಕ್ಯಾನ್ಸರ್ ಪೀಡಿತರಿಗೆ ವೈದ್ಯಕೀಯ ನೆರವು, ನಾಲ್ಕು ಮನೆಗಳ ನಿರ್ವಾಣ ಸಹಿತ 40 ಕಾರ್ಯಕ್ರಮ ಹಮ್ಮಿಕೊಂಡಿದೆ. ಸುಧೀರ್ ವಿ.ಅಮೀನ್, ಪ್ರಧಾನ ಸಂಚಾಲಕ, ಮಾರುತಿ ಜನಸೇವಾ ಸಂಘ https://www.vijayavani.net/koti-chennai-jodukare-kambalda-sabha-program https://www.vijayavani.net/mangalore-university-kanachur-educational-agreement