ಮಧ್ಯವರ್ತಿಗಳಿಂದ ದೂರವಿರಿ

Mediator, Nalatwada, Asare House, GPS, Soap Detergent Corporation, MLA C.S. Nadagowda,
ನಾಲತವಾಡದಲ್ಲಿ ಆಸರೆ ಮನೆಗಳ ನಿರ್ಮಾಣದ ಆದೇಶ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು. ವಿಜಯಲಕ್ಷ್ಮೀ ಇಳಕಲ್ಲ, ಬಸವರಾಜ ಗಂಗನಗೌಡರ, ಪೃತ್ವಿರಾಜ ನಾಡಗೌಡ, ಈರಣ್ಣ ಕೊಣ್ಣೂರ ಇತರರಿದ್ದರು.
Published on

ನಾಲತವಾಡ: ಆಸರೆ ಮನೆಗಳ ನಿರ್ಮಾಣದ ಹೆಸರಿನಲ್ಲಿ ಜಿಪಿಎಸ್ ಮಾಡಿಸಿಕೊಡುವ ಆಮಿಷವೊಡ್ಡಿ ಹಣ ಸುಲಿಗೆ ಮಾಡುವ ಮಧ್ಯವರ್ತಿಗಳಿಂದ ಜನತೆ ದೂರವಿರಿ ಎಂದು ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷ- ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಇಲ್ಲಿಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ 2018-19ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯ ಎಸ್ಸಿ ಹಾಗೂ ಎಸ್ಟಿ ಲಾನುಭವಿಗಳಿಗೆ ಮನೆ ನಿರ್ಮಾಣದ ಆದೇಶ ಪತ್ರಗಳ ವಿತರಣಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

ಎಲ್ಲೋ ಯಾರದೋ ಸ್ಥಳಗಳಲ್ಲಿ ಜಿಪಿಎಸ್ ಮಾಡಿಸಿ ಕೇವಲ ಒಂದೇ ಬಿಲ್ ಪಡೆದರೆ ಇನ್ನುಳಿದ ಬಿಲ್ ತಮ್ಮ ಕೈಸೇರುವುದು ಕಠಿಣ ಎನ್ನುವ ಅಂಶ ಗಮನದಲ್ಲಿಟ್ಟುಕೊಂಡು ಅಧಿಕೃತವಾಗಿ ಮನೆ ನಿರ್ಮಿಸಿಕೊಳ್ಳಬೇಕು.

ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಬೆಂಬಲಿಸಿದರೆ ಇನ್ನೂ ಉತ್ತಮ ಜನಪರ ಯೋಜನೆಗಳನ್ನು ನಾವು ಜಾರಿಗೆ ತರುತ್ತೇವೆ ಎಂದರು.

ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಳಕಲ್ಲ, ಉಪಾಧ್ಯಕ್ಷ ಬಸವರಾಜ ಗಂಗನಗೌಡರ, ಸದಸ್ಯ ಪೃತ್ವಿರಾಜ ನಾಡಗೌಡ, ಸಿಒ ಈರಣ್ಣ ಕೊಣ್ಣೂರ, ಡಾ.ಎಸ್.ಬಿ.ಗಂಗನಗೌಡರ, ಅಮರಪ್ಪ ಸೀರಿ, ಮುತ್ತು ಗೊರಬಾಳ, ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ, ರಮೇಶ ಆಲಕೊಪ್ಪರ, ಅಲ್ಲಾಬಕ್ಷ ಮೂಲಿಮನಿ, ಮಹ್ಮದ ನಾಡದಾಳ, ಶರಣಬಸಪ್ಪ ಇಳಕಲ್ಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net