ಇಂದಿನಿಂದ ಮಾಧ್ಯಮ ಕಾರ್ಯಾಗಾರ

Media workshop from today
Media workshop from today
Published on

ವಿಜಯಪುರ : ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೆ. 11, 12 ರಂದು "ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಆರೋಗ್ಯ' ಎಂಬ ವಿಷಯ ಕುರಿತು ಮಾಧ್ಯಮ ಕಾರ್ಯಗಾರ ನಡೆಯಲಿದೆ.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಯುನಿಸೆಫ್​ ಪ್ರಾಯೋಜಕತ್ವ ಮತ್ತು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಸೆ. 11 ರಂದು ಬೆಳಗ್ಗೆ 10.30 ಕ್ಕೆ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕಾರ್ಯಾಗಾರ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಹೈದರಾಬಾದ್​ ಯುನಿಸೆಫ್​ನ ಪ್ರಸೂನ್​ ಸೇನ್​ ಭಾಗವಹಿಸುವರು. ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಅಧ್ಯಕ್ಷತೆ ವಹಿಸುವರು. ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. .ಎಚ್​.ಎಂ. ಚಂದ್ರಶೇಖರ ಉಪಸ್ಥಿತಿ ವಹಿಸುವರು.

ತಾಂತ್ರಿಕ ಗೋಷ್ಠಿಗಳು : ಕಾರ್ಯಾಗಾರದ ಮೊದಲ ತಾಂತ್ರಿಕ ಗೋಷ್ಠಿಯಲ್ಲಿ ಮಕ್ಕಳ ಹಕ್ಕುಗಳು : ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚೌಕಟ್ಟು ಮತ್ತು ಕಾನೂನುಗಳ ಎಂಬ ವಿಷಯದ ಕುರಿತ ಕರ್ನಾಟಕ ಮಕ್ಕಳ ಹಕ್ಕುಗಳ ಸಂಯೋಜಕ ಡಾ. ವಾಸುದೇವ ಶರ್ಮಾ ವಿಚಾರವನ್ನು ಮಂಡಿಸುವರು. ಎರಡನೇ ಗೋಷ್ಠಿಯಲ್ಲಿ ಯುನಿಸೆಫ್​ನ ಆರೋಗ್ಯತ ಡಾ. ಶ್ರೀಧರ ಪ್ರಹ್ಲಾದ ರೈವಂಕಿ ಮಕ್ಕಳ ಆರೋಗ್ಯ ಸಮಸ್ಯೆಗಳ ಮುನ್ನೋಟ : ಎನ್​ಸಿಡಿಎಸ್​ ಮತ್ತು ಮಾನಸಿಕ ಆರೋಗ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು. ಸೆ. 12ರಂದು ನಡೆಯುವ ಕಾರ್ಯಗಾರದ ಮೂರನೇ ಗೋಷ್ಠಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪೊ. ಸಪ್ನಾ ಎಂ.ಎಸ್​., ಮಕ್ಕಳ ಹಕ್ಕುಗಳು ಮತ್ತು ಮಾಧ್ಯಮಗಳ ವರದಿಗಾರಿಕೆ ಎಂಬ ವಿಷಯದ ಕುರಿತ ಉಪನ್ಯಾಸ ಮತ್ತು ನಾಲ್ಕನೇ ಗೋಷ್ಠಿಯಲ್ಲಿ ಭಾರತೀಯ ಮಕ್ಕಳ ಪ್ರತಿಷ್ಠಾನ ಕಾರ್ಯಕ್ರಮ ಸಂಯೋಜಕಿ ಗೌರಿ ಅರಸು ಡಿಜಿಟಲ್​ ಸುರಕ್ಷತೆ ಮತ್ತು ಮಕ್ಕಳು ಎಂಬ ವಿಷಯದ ಕುರಿತ ಮಾತನಾಡಲಿದ್ದಾರೆ ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net