

ಕೊಪ್ಪಳ: ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಬಳಕೆಯೂ ಅಷ್ಟೇ ಇದೆ. ಬಳಸುವಾಗ ಎಚ್ಚರದಿಂದ ಬಳಸಿ ಎಂದು ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ತಾಲೂಕಿನ ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ಬಹುತ್ವ ಮೀಡಿಯಾದಿಂದ ಗುರುವಾರ ಹಮ್ಮಿಕೊಂಡಿದ್ದ ಮೀಡಿಯಾ ೆಸ್ಟ್‌ನ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮದಲ್ಲಿದ್ದವರಿಗೆ ಆಸಕ್ತಿ ಜತೆಗೆ ಭಾಷಾ ಹಿಡಿತ, ಜ್ಞಾನ, ಕೌಶಲ ಅವಶ್ಯ. ಜನ ಸಮುದಾಯದ ವಿಶ್ವಾಸ ಗಳಿಸುವ ಕೆಲಸ ಮಾಧ್ಯಮ ಮಾಡಬೇಕು. ಸತತ ಪ್ರಯತ್ನ, ವಿನಯತೆ, ವಿಧೆಯತೆ, ಗುರು ತೋರಿದ ದಾರಿಯಲ್ಲಿ ನಡೆದಾಗ ನಿಮ್ಮ ಕನಸು ನನಸಾಗುವುದೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕರ್ನಾಟಕ ವಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ವಾತನಾಡಿ, ವಿದ್ಯಾರ್ಥಿಗಳು ವಾಧ್ಯಮ ಅಕಾಡೆಮಿ ಬಗ್ಗೆ ತಿಳಿಯಿರಿ. ನೀವು ತರಗತಿಯಲ್ಲಿ ಕಲಿತ್ತಿದ್ದು ವಾಧ್ಯಮದಲ್ಲಿ ಸಹಾಯವಾಗುವುದಿಲ್ಲ. ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡಿ. ವಾಧ್ಯಮ ಹಬ್ಬ ಹಮ್ಮಿಕೊಂಡು ನಿಮಗೆಲ್ಲ ಮಾಧ್ಯಮದ ಅರಿವು ಮೂಡಿಸುವ ಯೋಜನೆ ಇದೆ. ಆಯೋಜನೆಗೆ ಬಗ್ಗೆ ಚರ್ಚಿಸಲಾಗುವುದು. ಅಭಿವೃದ್ಧಿ ಪತ್ರಕೋದ್ಯಮ ಬೆಳೆಸೋಣ ಎಂದರು.
ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಮಾಧ್ಯಮ ಎಂದರೆ ಪ್ರಶ್ನಿಸುವುದು. ಆದರೆ, ಇಂದು ಪ್ರಶ್ನೆ ಕೇಳುವುದೇ ಅಪರಾಧ ಎಂಬಂತಾಗಿದೆ. ಮಾಧ್ಯಮ ರಂಗ ಗುಲಾಮರಾಗಬೇಕೆಂಬ ವಾತಾವರಣ ಸೃಷ್ಟಿಯಾಗಿದೆ. ಪ್ರಶ್ನಿಸುವ ಅಗತ್ಯವಿಲ್ಲ ಎಂದರೆ, ಮಾಧ್ಯಮಕ್ಕೆ ಬರುವ ಅಗತ್ಯವಿಲ್ಲ. ಸಮಾಜ, ಸರ್ಕಾರದ ನಡುವೆ ಮಾಧ್ಯಮ ಸೇತುವೆಯಾಗಿ ಕೆಲಸ ಮಾಡಬೇಕು. ನೀವು ಮೌನವಾದರೆ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.
ಪತ್ರಕರ್ತರಾದ ರಾಜಾ ಬಕ್ಷಿ, ರಾಜು ಬಿ.ಆರ್. ಮಾತನಾಡಿದರು. ಪ್ರಾಚಾರ್ಯರಾದ ತಿಮ್ಮಾರೆಡ್ಡಿ ಮೇಟಿ, ಗವಿಸಿದ್ದಪ್ಪ ಮುತ್ತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಿರಾಜ್ ಬಿಸರಳ್ಳಿ, ಮಂಜುನಾಥ ಗೊಂಡಬಾಳ ಇತರರಿದ್ದರು.