ಗುಣಾತ್ಮಕ ಸುದ್ದಿಗಳಿಗೆ ಆದ್ಯತೆ ಇರಲಿ, ಡಿಸಿ ನಲಿನ್​ ಅತುಲ್​ ಸಲಹೆ

media fest in koppal govt degree collage DC Naleen athul CEO Rahul pandey
ಕೊಪ್ಪಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೀಡಿಯಾ ೆಸ್ಟ್​ನಲ್ಲಿ ಹಲವು ವಿದ್ಯಾರ್ಥಿಗಳು ಭಾಗಿಯಾದರು. ತೀರ್ಪುಗಾರರಾದ ಅಮಿನ್​ ಅತ್ತಾರ, ಅಮರದೀಪ ಪಿ.ಎಸ್​. ಇದ್ದರು.
Published on

ಕೊಪ್ಪಳ: ಸಮಾಜದಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯ. ಸತ್ಯ ಅರಿತು ಗುಣಾತ್ಮಕ ಸುದ್ದಿ ಮಾಡುವ ಮೂಲಕ ಮಾಧ್ಯಮ ತನ್ನ ಜವಾಬ್ದಾರಿ ನಿರ್ವಹಿಸಲಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಹೇಳಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹುತ್​ ಬಳಗದಿಂದ ವಿವಿಧ ಕೊಪ್ಪಳ, ವಿಜಯನಗರ, ಬಳ್ಳಾರಿಯ ವಿವಿಧ ಕಾಲೇಜುಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೊಪಣ ಮೀಡಿಯಾ ೆಸ್ಟ್​ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಕುರಿತು ಎಲ್ಲರೂ ಅರಿಯಬೇಕು. ಮುದ್ರಣ ಯಂತ್ರ ಆವಿಷ್ಕಾರದಿಂದ ಜಗತ್ತು ಬದಲಾಯಿತು. ಇಂದು ಸಾಮಾಜಿಕ ಜಾಲತಾಣಗಳು ಸಾಕಷ್ಟು ಕ್ರಿಯಾಶೀಲವಾಗಿವೆ. ಯಾವುದು ಸತ್ಯ ಎಂದು ಹುಡುಕುವಂತಾಗಿದೆ. ಈ ಮೊದಲು ಕೆಲವೇ ಕೆಲವರಿಗೆ ಮಾಧ್ಯಮಗಳು ತಲುಪುತ್ತಿದ್ದವು. ಇಂದು ಎಲ್ಲರ ಅಂಗೈಯಲ್ಲಿ ಬಂದು ಕೂತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಸದ್ಯ ಇರುವ ಡಿಜಿಟಲ್​ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯ. ವಾಕ್​ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವವಿದೆ. ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಾಗಬೇಕು. ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು. ವಿಷಯ ಪ್ರಕಟಿಸುವ ಮುನ್ನ ಖಚಿತಪಡಿಸಿಕೊಳ್ಳಿ. ಇದರಿಂದ ವಿಶ್ವಾರ್ಹತೆ ಹೆಚ್ಚುತ್ತದೆ. ಕೊಪ್ಪಳದ ಮಾಧ್ಯಮದವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಮ್ಮ ಅಭಿಪ್ರಾಯ ಪಡೆದು ಖಚಿತಪಡಿಸಿಕೊಳ್ಳುತ್ತಾರೆ. ಇದರಿಂದ ನಾವೂ ಸುಧಾರಣೆ ಆಗಲು ಸಾಧ್ಯ ಎಂದರು.

ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಮಾತನಾಡಿ, ಮಾಧ್ಯಮಗಳು ಜವಾಬ್ದಾರಿ ಅರಿತು ಕೆಲಸ ಮಾಡಲಿ. ನಿಮ್ಮ ಒಂದು ಸುದ್ದಿ ಸಮಾಜ ಹಾಗೂ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅಸತ್ಯ ಮಾಹಿತಿ ಪ್ರಕಟಿಸಬೇಡಿ. ಅದು ಮತ್ತೊಂದು ಅನಾಹುತಕ್ಕೆ ದಾರಿಯಾಗಬಹುದು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಗಣಪತಿ ಲಮಾಣಿ, ಪತ್ರಕರ್ತ ಸಿರಾಜ್​ ಬಿಸರಳ್ಳಿ ಮಾತನಾಡಿದರು. ಪತ್ರಕರ್ತ ಮಂಜುನಾಥ ಗೊಂಡಬಾಳ ಸಂವಿಧಾನ ಪೀಠಿಕೆ ಓದಿಸಿದರು. ವೇದಿಕೆ ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಪತ್ರಕರ್ತರಾದ ರಾಜು ಬಿ.ಆರ್​., ಎಂ.ಡಿ ಕಲೀಲ್​ ಹುಡೇವು, ಅಖಿಲ್​ ಹುಡೇವು , ಮಾರುತಿ, ದಾವಲಸಾಬ, ಡಾ.ಪಾಷಾ ಎಚ್​.ವಿ, ಹಿರಿಯ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಸಾಧಿಕ್​ ಅಲಿ, ಎನ್​.ಎಂ.ದೊಡ್ಡಮನಿ, ದತ್ತು ಕಮ್ಮಾರ, ಶ್ರೀಕಾಂತ ಅಕ್ಕಿ, ಶರಣು ಹುಲಿಹೈದರ್​, ಮುಕ್ಕಣ್ಣ ಕತ್ತಿ, ತೀರ್ಪುಗಾರರಾ ಅಮರದೀಪ, ಲಕ್ಷ$್ಮಣ ಪಿರಗಾರ, ಶೀಲಾ ಹಾಲ್ಕುರಿಕೆ, ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net