ಸಿಎನ್‌ಸಿಯಿಂದ ಮೀದಿ ಸಮರ್ಪಣೆ

cnc patthalodi
Published on

ಮಡಿಕೇರಿ: ಕಾವೇರಿ ತುಲಾ ಸಂಕ್ರಮಣದ ಪಥಲೋಧಿ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಕೋಟೆ ಮತ್ತು ನಾಲ್ನಾಡ್ ಅರಮನೆ ಆವರಣದಲ್ಲಿ ಕುತಂತ್ರಕ್ಕೆ ಸಿಲುಕಿ ಜೀವ ಕಳೆದುಕೊಂಡ ಹಿರಿಯ ಕೊಡವರಿಗೆ ಮೀದಿ ಸಮರ್ಪಿಸಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮೌನ ಪ್ರಾರ್ಥನೆಯ ಮೂಲಕ ಹಿರಿಯರನ್ನು ಸ್ಮರಿಸಿಕೊಂಡರು. ಅರಮನೆಯ ಪಿತೂರಿಯಲ್ಲಿ ಕೊಡವ ಜನಾಂಗೀಯ ಬುಡಕಟ್ಟು ಜನಾಂಗದ ಹತ್ಯೆಗಳು ಎರಡು ಶತಮಾನಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆದಿದೆ. ಷಡ್ಯಂತ್ರದಿಂದ ಪ್ರಾಣ ಕಳೆದುಕೊಂಡ ಅಮಾಯಕ ಹಿರಿಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಮಡಿಕೇರಿ ಕೋಟೆ ಮತ್ತು ನಾಲ್ನಾಡ್ ಅರಮನೆ ಆವರಣದಲ್ಲಿ ಪುಷ್ಪ ನಮನ ಸಲ್ಲಿಸುವ ಸಂದರ್ಭ ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಚಂಬಂಡ ಜನತ್, ನಂದೇಟಿರ ರವಿ, ಮಣವಟ್ಟಿರ ಚಿಣ್ಣಪ್ಪ, ಅಪ್ಪಾರಂಡ ಶ್ರೀನಿವಾಸ್, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ವಿವೇಕ್, ಪುದಿಯೊಕ್ಕಡ ಕಾಶಿ, ರಮೇಶ್ ಪಥಲೋಧಿ ದಿನದ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net