

ಯಲ್ಲಾಪುರ ವಿಶ್ವದರ್ಶನ ಶಿಕ್ಷಣ ಸಮೂಹದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ನಲ್ಲಿ ಏ. 23ರಂದು ಬೆಳಗ್ಗೆ 10ರಿಂದ ಸಂಜೆಯವರೆಗೆ ಮಾಧ್ಯಮ ಸಮಾಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ವಿವಿಧೆಡೆಯಿಂದ ಬರುವ ಹಿರಿಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಭವಿಷ್ಯದ ಪತ್ರಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಹಿರಿಯ ಪತ್ರಕರ್ತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಡಾನ್ಸ್, ಫೋಟೋಗ್ರಫಿ, ರೀಲ್ಸ್, ಚರ್ಚೆ, ಪಿಟುಸಿ, ರೇಡಿಯೊ ಜಾಕಿ, ಸುದ್ದಿ ಸಂಪಾದನೆ, ಕಾಲ್ಪನಿಕ ವರದಿ ಸೇರಿದಂತೆ 10 ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶಿವಾನಂದ ತಗಡೂರು, ಸುದರ್ಶನ ಚೆನ್ನಂಗಿಹಳ್ಳಿ, ಜಿ.ಯು.ಭಟ್ಟ ಹೊನ್ನಾವರ, ಗಂಗಾಧರ ಹಿರೇಗುತ್ತಿ, ಜಯಪ್ರಕಾಶ ಶೆಟ್ಟಿ ಉಪ್ಪಳ, ಶ್ರೀಧರ ಮಂಗಳೂರು, ಡಾ. ಸಂಜಯಕುಮಾರ ಮಾಲಗತ್ತಿ, ಸುಬ್ರಾಯ ಭಟ್ಟ ಬಕ್ಕಳ, ಕೃಷ್ಣಮೂರ್ತಿ ಹೆಬ್ಬಾರ, ನಾಗರಾಜ ಇಳೆಗುಂಡಿ, ಪ್ರಕಾಶ ಶೇಟ್, ಬೀರಣ್ಣ ನಾಯಕ ಮೊಗಟಾ, ರಾಧಾ ಹಿರೇಗೌಡರ, ಗಣೇಶ ಇಟಗಿ, ವಸಂತಕುಮಾರ ಕತಗಾಲ, ರೇಡಿಯೊಸಿಟಿ ಕಾರ್ಯಕ್ರಮ ನಿರ್ದೇಶಕ ಆರ್.ಜೆ.ರಜಸ್, ನಿರ್ಮಾಪಕ ಮಹೇಶ ಚಿದ್ರೆ, ನಟ ನಿರಂಜನ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಬೀರಣ್ಣ ನಾಯಕ ಮೊಗಟಾ, ಡಾ. ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್ ಕೊ ಆರ್ಡಿನೇಟರ್ ನೇಹಾ ಶೆಟ್ಟಿ, ಪ್ರಾಧ್ಯಾಪಕಿ ಸ್ಪೂರ್ತಿ ಹೆಗಡೆ ಇದ್ದರು.
--------ಬಾಕ್ಸ್----------
ವಿದ್ಯಾರ್ಥಿ ವೇತನ
ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ವರದಿಗಾರಿಕೆಯ ಅವಕಾಶ ಹಾಗೂ ವಿದ್ಯಾರ್ಥಿ ವೇತನವನ್ನೂ ಆರಂಭಿಸಲಾಗುತ್ತಿದೆ. ಸಂಸ್ಥೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದರು.
ಬಾಕ್ಸ್
ನೋಂದಣಿಗೆ ಅವಕಾಶ
ಮೀಡಿಯಾ ಫೆಸ್ಟ್‌ನಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಇಲ್ಲಿ ನೀಡಿರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ಫಾರ್ಮ್ ಭರ್ತಿ ಮಾಡಬಹುದಾಗಿದೆ.