ಮೈಸೂರಿನ ಈಜುಪಟುಗಳಿಗೆ ಪದಕ

swimming
Published on

ಮೈಸೂರು: ಬೆಂಗಳೂರಿನ ವೈಟ್‌ಫೀಲ್ಡ್‌ನ ಈಜುಕೊಳದಲ್ಲಿ ಝೀ ಈಜು ಅಕಾಡೆಮಿ ವತಿಯಿಂದ ಇತ್ತೀಚೆಗೆ ನಡೆದ ಮುಕ್ತ ಈಜು ಸ್ಪರ್ಧೆಯಲ್ಲಿ ಮೈಸೂರಿನ ಈಜುಪಟುಗಳು ಪದಕ ಬೇಟೆಯಾಡಿದ್ದಾರೆ. ನಗರದ ಎಆರ್‌ಸಿ ಸ್ಪೋರ್ಟ್ಸ್ ಜೋನ್‌ನ ಈಜುಪಟುಗಳು 2 ಚಿನ್ನ, 3 ಬೆಳ್ಳಿ, 2 ಕಂಚು ಪದಕ ಗಳಿಸಿ ಗಮನ ಸೆಳೆದಿದ್ದಾರೆ.


ಪಿ.ಕ್ರಿಶ್ ಗುಂಪು 5 ವಿಭಾಗದ 50 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ, 50 ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿ ಹಾಗೂ 50 ಮೀ.ಬೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಗಳಿಸುವ ಜತೆಗೆ ವೈಯಕ್ತಿಕ ಚಾಂಪಿನ್‌ಶಿಪ್ ಪ್ರಶಸ್ತಿ ಪಡೆದಿದ್ದಾರೆ.

ಲಿಖಿತ್ ಪ್ರವರ್ಧನ್ ಇದೇ ವಿಭಾಗದ 50 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಚಿನ್ನ, 50 ಮೀ. ಫ್ರೀಸ್ಟೈಲ್ ಹಾಗೂ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಗಳಿಸಿ ಗಮನ ಸೆಳೆದಿದ್ದಾರೆ. ಗುಂಪು 4 ವಿಭಾಗದಲ್ಲಿ ಭುವನ್ ಎಚ್. ಪದ್ಮಶಾಲಿ 50ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net