ಕರಾಟೆಯಲ್ಲಿ ಕಾರ್ಗಲ್ ಮಕ್ಕಳ ಪದಕ ಸಾಧನೆ

02kgl01
ತೀರ್ಥಹಳ್ಳಿಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗಳಿಸಿದ ಜೋಗ ಕಾರ್ಗಲ್ ಕರಾಟೆ ತರಬೇತಿ ಕೇಂದ್ರದ ಮಕ್ಕಳು.
Published on

ಕಾರ್ಗಲ್: ತೀರ್ಥಹಳ್ಳಿಯ ಸುವರ್ಣ ಸಹಕಾರ ಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಜೋಗ- ಕಾರ್ಗಲ್ ಕರಾಟೆ ತರಬೇತಿ ಕೇಂದ್ರದ ಮಕ್ಕಳು 7 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜೋಗ- ಕಾರ್ಗಲ್ ಕರಾಟೆ ತರಬೇತಿ ಕೇಂದ್ರದ 7 ವಿದ್ಯಾರ್ಥಿಗಳು ಪ್ರತ್ಯೇಕ ವಿಭಾಗದಲ್ಲಿ ಒಟ್ಟು 14 ಪದಕಗಳನ್ನು ಪಡೆದಿದ್ದಾರೆ. ಎ.ಪಿ.ಪ್ರನುಶಾ 2 ಚಿನ್ನ, ಎ.ದನ್ವಿತ್ 2 ಚಿನ್ನ ಹಾಗೂ ಪ್ರಜ್ವಲ್ ಡ್ಯಾನಿಯಲ್ 2 ಚಿನ್ನ, ಎಂ.ಅನ್ಸು 1 ಬೆಳ್ಳಿ ಮತ್ತು 1 ಚಿನ್ನ, ತಮನ್ನಾ ಜೈನ್ 2 ಕಂಚು, ಡಿ. ಗೌತಮ್ 1 ಕಂಚು ಮತ್ತು 1 ಬೆಳ್ಳಿ, ಜಿ.ಪೃಥ್ವಿಕ್ 2 ಬೆಳ್ಳಿಯ ಪದಕ ಗಳಿಸಿದ್ದಾರೆ. ಎಂ.ಎಸ್.ಜನಾರ್ದನ ಜೋಗ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net