

ಮಸ್ಕಿ: ತಾಲೂಕಿನ ಮೆದಕಿನಾಳ ಗ್ರಾಮದ ಸುವರ್ಣಗಿರಿ ಶ್ರೀ ಚನ್ನಮಲ್ಲ ಶಿವಯೋಗಿಗಳ 68ನೇ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಜರುಗಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಶಿವಪುತ್ರಯ್ಯ ಮೆದಕಿನಾಳ ಹೇಳಿದರು.
ಇದನ್ನೂ ಓದಿ: ಮೆದಕಿನಾಳದಲ್ಲಿ ಆಲಿಕಲ್ಲು ಸುರಿಮಳೆ
ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಶಿವಯೋಗಿಗಳ ಜಾತ್ರಾ ಮಹೋತ್ಸವ ಜನವರಿ 3ರಂದು ನಡೆಯಲಿದೆ. ನೂತನ ಶೀಲಾಮಠ, ರಥ, ಮೂರ್ತಿ ಪ್ರತಿಷ್ಠಾಪನೆ, ಉಡಿತುಂಬುವ ಕಾರ್ಯ ಹಾಗೂ ಸಾಮೂಹಿಕ ವಿವಾಹ ಜರುಗಲಿವೆ.
48ಕ್ಕೂ ಅಧಿಕ ಸ್ವಾಮಿಜಿಗಳು ಹಾಗೂ ವಿವಿಧ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬ್ರಾಹ್ಮಿಮುಹೂರ್ತದಲ್ಲಿ ಮಹಾರುದ್ರಾಭಿಷೇಕ, ಲಿಂಗದೀಕ್ಷೆ, ನೂತನ ರಥೋಸ್ತವಕ್ಕೆ ಕಳಸಾರೋಹಣ ಹಾಗೂ ಮಡಿತೇರು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಮಲ್ಲಿಕಾರ್ಜುನ ಪರಡ್ಡಿ, ರಾಜಣ್ಣ ಪರಡ್ಡಿ, ಲಕ್ಷ್ಮೀಕಾಂತ ಇತರರಿದ್ದರು.