

ಮಡಿಕೇರಿ:
೨೧ ಮೂಲ ನಿವಾಸಿ ಜನಾಂಗದವರ ಕೊಡವ ಭಾಷಿಕ ಸಮುದಾಯಗಳ ಕೂಟದ ೨೦೨೪-೨೭ನೇ ಸಾಲಿನ ಅಧ್ಯಕ್ಷರಾಗಿ ಡಾ. ಮೇಚೀರ ಸುಭಾಷ್ ನಾಣಯ್ಯ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೂಡಂಡ ಸಾಬ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿರಾಜಪೇಟೆಯಲ್ಲಿ ಮಂಗಳವಾರ ನಡೆದ ಕೂಟದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಖಜಾಂಚಿಯಾಗಿ ಪಡಿಞರಂಡ ಪ್ರಭುಕುಮಾರ್, ಉಪಾಧ್ಯಕ್ಷರುಗಳಾಗಿ ತೋರೆರ ಮುದ್ದಯ್ಯ, ಕುಡಿಯರ ಎಂ.ಮುತ್ತಪ್ಪ, ನೆರೆಯಂಡಮ್ಮಂಡ ಉಮಾ ಪ್ರಭು, ಪೊನ್ನೀರ ಗಗನ್, ಸಹ ಕಾರ್ಯದರ್ಶಿಗಳಾಗಿ ಮೊಳ್ಳೆಕುಟ್ಟಂಡ ದಿನು ಬೋಜಪ್ಪ ಹಾಗೂ ಪಟ್ಟಚಾರೀರ ದಿನೇಶ್ ಕಾರ್ಯಪ್ಪ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಕಣಿಯಂಡ ಜೆ.ಪ್ರಕಾಶ್, ಮೇದಪ್ಪಂಡ ಬಿ.ಕಿರಣ್, ತೋರೆರ ಕಾಶಿ ಕಾರ್ಯಪ್ಪ, ಪಾತಂಡ ಸಂತೋಷ್, ಜೋಕಿರ ಜೀವನ್, ಕೋಲೆಯಂಡ ಯು. ಗಿರೀಶ್, ಪೊಟ್ಟಂಡ ಗಣೇಶ್, ಬೀಕಚಂಡ ಬೆಳ್ಯಪ್ಪ, ಕಾಪಾಳ ಮಿಲನ್ ಭರತ್, ಮಲೆಯಂಡ ಮುತ್ತಪ್ಪ, ಪೊನ್ನಜ್ಜೀರ ಕಿಶು ಭರತ್, ಮೇದರ ಚಂದ್ರ, ಚೋಕೀರ ಭೀಮಯ್ಯ, ಪುತ್ತಮನೆ ಅನಿಲ್ ಪ್ರಸಾದ್, ಮಾರಂಗಿ ರಾಜಾ ಸುಬ್ರಮಣಿ, ಪೊಟ್ಟಂಡ ಎಂ.ಗಣೇಶ್, ಚೆಲ್ಯಂಡ ಚಂದ್ರಶೇಖರ್, ಅರಮನೆ ಪಾಲೆರ ದೇವಯ್ಯ ಆಯ್ಕೆಯಾಗಿದ್ದಾರೆ.
ಡಾ.ಸುಭಾಷ್ ನಾಣಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ಪ್ರಭುಕುಮಾರ್ ಮಂಡಿಸಿದರು. ಕಾರ್ಯದರ್ಶಿ ಸಾಬ ಸುಬ್ರಮಣಿ, ದಿನು ಬೋಜಪ್ಪ ಇದ್ದರು.