ಯಾಂತ್ರೀಕೃತ ಭತ್ತದ ನಾಟಿಗೆ ಚಾಲನೆ

mbr
Published on

ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿ ಗ್ರಾಮದ ರೈತ ಶ್ರೀನಿವಾಸ್ ಕುಲಕರ್ಣಿ ಅವರ ಗದ್ದೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ಯಾಂತ್ರೀಕೃತ ಭತ್ತದ ನಾಟಿ ಕಾರ್ಯವನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಜಿ. ಮಂಜುನಾಥ್ ಪಟೇಲ್ ಯಂತ್ರ ಚಾಲನೆ ಮಾಡುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಯಂತ್ರಶ್ರೀ ಭತ್ತದ ನಾಟಿ ಪದ್ಧತಿಗೆ ರೈತರು ಹೆಚ್ಚು ಒಲವು ತೋರಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲಾ ಜನಜಾಗೃತಿ ಸದಸ್ಯ ಮಂಜು ದೊಡ್ಡನಿ, ಮಲೇಬೆನ್ನೂರು ವಲಯ ಯೋಜನಾಧಿಕಾರಿ ವಸಂತ ದೇವಾಡಿಗ, ಸಿ.ಎಚ್.ಎಸ್.ಸಿ. ಯೋಜನಾಧಿಕಾರಿ ಶಶಿ, ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ರಾಘವೇಂದ್ರ, ಕೇಂದ್ರ ಕಚೇರಿಯ ನಾಟಿ ಬ್ಯಾಂಕ್ ಕೃಷಿ ಮೇಲ್ವಿಚಾರಕ ಸುನೀಲ್, ಸಿ.ಎಚ್..ಎಸ್.ಸಿ. ವ್ಯವಸ್ಥಾಪಕ ಈರಣ್ಣ, ಕೃಷಿ ಮೇಲ್ವಿಚಾರಕ ಮನೋಹರ್, ಮೆಕ್ಯಾನಿಕ್ ನಾಗಭೂಷಣ, ಯಂತ್ರ ಚಾಲಕ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net