ಯಂತ್ರಶ್ರೀ ಪದ್ಧತಿಯಿಂದ ಉತ್ತಮ ಇಳುವರಿ :ಮಹೇಶ್ ಎಂ.ಡಿ

paddy planting
ಕಳವಾಡಿಯಲ್ಲಿ ಯಾಂತ್ರಿಕ್ರತ ಭತ್ತ ಬೇಸಾಯ ಯಂತ್ರಶ್ರೀ ನಾಟಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ತರ ಕನ್ನಡ ಜಿಲ್ಲೆಯ ಯೋಜನಾ ನಿರ್ದೇಶಕರ ಮಹೇಶ್ ಎಂ.ಡಿ. ಚಾಲನೆ ನೀಡಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಹೆಚ್ಚುತ್ತಿರುವ ಭತ್ತ ಕೃಷಿ ವೆಚ್ಚ, ಕೂಲಿ ಕಾರ್ಮಿಕರ ಕೊರತೆ, ದರ ಕುಸಿತದಿಂದ ಹೈರಾಣಾಗಿರುವ ರೈತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಯಂತ್ರಶ್ರೀ ಪದ್ಧತಿಯಡಿ ಭತ್ತದ ಯಾಂತ್ರಿಕ್ರತ ನಾಟಿಗೆ ಮುಂದಾಗಿದ್ದಾರೆ. ಈ ಪದ್ಧತಿಯಿಂದ ಉತ್ತಮ ಇಳುವರಿ ಕೂಡ ಪಡೆದಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಯೋಜನಾ ನಿರ್ದೇಶಕರ ಮಹೇಶ್ ಎಂ.ಡಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೈಂದೂರು, ನಾಟಿ ಯಂತ್ರ ಬ್ಯಾಂಕ್ ಬೈಂದೂರು ಹಾಗೂ ಶ್ರೀ ಮೂಕಾಂಬಿಕಾ ಭತ್ತ ಬೆಳೆಗರಾರ ಒಕ್ಕೂಟ ಸಹಯೋಗದಲ್ಲಿ ಕಳವಾಡಿ ವೆಂಕಟ ಪೂಜಾರಿ ಅವರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಶ್ರೀ ನಾಟಿಗೆ ಚಾಲನೆ ನೀಡಿ ಮಾತನಾಡಿದರು.

ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ, ಉಡುಪಿ ಪ್ರಾದೇಶಿಕ ಸಿಎಸ್‌ಎಚ್‌ಸಿ ವಿಭಾಗಿಯ ಯೋಜನಾಧಿಕಾರಿ ಹರೀಶ್ ಆರ್.ಎಸ್., ಮಾಜಿ ಯೋಧ ಮುತ್ತಯ್ಯ ಪೂಜಾರಿ, ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷ ಮಂಜುನಾಥ ಪೂಜಾರಿ, ಮೂಕಾಂಬಿಕಾ ಭತ್ತ ಬೆಳೆಗಾರರ ಸಿಇಒ ಅನಿಲ್, ಕೃಷಿ ಮೇಲ್ವಿಚಾರಕರಾದ ರಾಜು, ಅರ್ಪಿತ್, ಮಯ್ಯಡಿ ಒಕ್ಕೂಟ ಅಧ್ಯಕ್ಷೆ ಗೀತಾ, ದೇವಮ್ಮ, ರಾಮ ಪೂಜಾರಿ, ನಾಗರಾಜ್, ಸಂತೋಷ್, ರೈತರು ಹಾಗೂ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net